ಶಿವಮೊಗ್ಗ: ಸಾಗರದ ಜೋರಡಿ ವಲಯದ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಕಡಿತಲೆ ಮಾಡಿದ್ದಂತ ಸಾಗುವಾನಿ ಮರವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚೋರಡಿಯ ಉಪ ವಲಯ ಅರಣ್ಯಾಧಿಕಾರಿ ಕಾಮನಾಯ್ಕ್ ಅವರಿಗೆ ತಮ್ಮ ವ್ಯಾಪ್ತಿಯ ಕೋಟೆಹಾಳದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿಯುತ್ತಿರುವ ಮಾಹಿತಿ ತಿಳಿದು ಬಂದಿತ್ತು. ಈ ಖಚಿತ ಮಾಹಿತಿ ಆಧರಿಸಿ ಸರ್ವೆ ನಂಬರ್.118ರಲ್ಲಿ 2 ಸಾಗುವಾನಿ ಮರ ಕಡಿತಲೆ ಮಾಡಿ, 7 ತುಂಡುಗಳನ್ನಾಗಿ ಮಾಡಿದ್ದಂತ ಸುಮಾರು 0.641 ಕ್ಯೂಬಿಕ್ ನಾಟವನ್ನು ಸೀಜ್ ಮಾಡಿದ್ದಾರೆ.
ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡುತ್ತಿದ್ದಂತ ಸತ್ಯನಾರಾಯಣ, ಶರಣು, ಅಶೋಕ ಎಂಬುವರ ವಿರುದ್ಧ ಅರಣ್ಯ ಇಲಾಖೆ ಕೇಸ್ ದಾಖಲಿಸಿದೆ. ಈ ಮೂಲಕ ಅಕ್ರಮವಾಗಿ ಸಾಗುವಾನಿ ಮರ ಕಡಿದಂತವರಿಗೆ ಅರಣ್ಯ ಇಲಾಖೆಯಿಂದ ಬಿಸಿ ಮುಟ್ಟಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಸಿಎಫ್ ಹನುಮಂತಪ್ಪ.ಕೆ.ಟಿ ನಿರ್ದೇಶನದಂತೆ, ಡಿಎಫ್ಓ ಮೊಹಮ್ಮದ್ ಫಯಾಜುದ್ದೀನ್, ಸಾಗರ ಎಸಿಎಫ್ ರವಿ.ಕೆ ಮಾರ್ಗದರ್ಶನದಲ್ಲಿ, ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ.ಬಿ ಸೂಚನೆಯಂತೆ ಚೋರಡಿಯ ಡಿಆರ್ ಎಫ್ ಓ ಕಾಮನಾಯ್ಕ್ ಹಾಗೂ ಸಿಬ್ಬಂದಿಗಳು ನಡೆಸಿದ್ದರು. ಅವರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..
ಶಿವಮೊಗ್ಗ: ಸಾಗರದ ಉಳ್ಳೂರಲ್ಲಿ ಅಕ್ರಮವಾಗಿ ‘ಮರ ಕಡಿತಲೆ’ ಮಾಡಿದವರ ವಿರುದ್ಧ ಕೇಸ್ ದಾಖಲು
ಸ್ಪರ್ಶ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ರೊಬೋಟಿಕ್ ಶಸ್ತ್ರಚಿಕಿತ್ಸೆ: 75 ವರ್ಷದ ತಾಯಿಯಿಂದ ಮಗನಿಗೆ ಮರುಜೀವ








