ಬೆಳಗಾವಿ: ಕರಡಿ ದಾಳಿಗೆ ಒಳಗಾಗಿ, ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಂತ ವ್ಯಕ್ತಿಗೆ ಸರ್ಕಾರದಿಂದ 10 ಲಕ್ಷ ಪರಿಹಾರವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದರು.
ಇತ್ತೀಚೆಗೆ ಬೆಳಗಾವಿಯ ಕಣಕುಂಬಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರಡಿ ದಾಳಿಯಿಂದ ಕಾಲು ಕಳೆದುಕೊಂಡು ಶಾಶ್ವತವಾಗಿ ಅಂಗವಿಕಲರಾಗಿ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 62 ವರ್ಷ ವಯಸ್ಸಿನ ಸಕಾರಾಮ್ ಮಹಾದೇವ್ ಗಾಂವಕರ್ ಸಾ ಮಾನ ಅವರ ಪತ್ನಿ ಸುಲೋಚನಾ ಎಸ್. ಗಾಂವಕರ್ ಮತ್ತು ಪುತ್ರ ಜನಾರ್ದನ ಗಾಂವಕರ್ ಅವರಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು 10 ಲಕ್ಷ ರೂ. ದಯಾತ್ಮಕ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಉನ್ನತ ಅರಣ್ಯಾಧಿಕಾರಿಗಳಾದ ಮಂಜುನಾಥ ಚವ್ಹಾಣ್ ಮತ್ತು ಮರಿಯಾ ಕ್ರಿಸ್ಟಿ ಅವರು ಉಪಸ್ಥಿತರಿದ್ದರು.
ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಜ.31, 2025 ರವರೆಗೆ ವಿಸ್ತರಿಸಿದ EPFO
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!