ಮಂಡ್ಯ: ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ, ದಕ್ಷಿಣ ಪದವೀಧರರ ಕ್ಷೇತ್ರದಿಂದ ಚುನಾಯಿತರಾಗಿರುವ ಮಧು ಮಾದೇಗೌಡ ವಿರುದ್ಧ ಅರಣ್ಯ ಇಲಾಖೆ ಅನುಮತಿ ಪಡೆಯದೇ ಮರಗಳನ್ನು ಕಡಿದಿದ್ದಕ್ಕೆ ಅವರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಫಾರಂನಲ್ಲಿ ಮರಗಳನ್ನು ಕಡಿಯಲಾಗಿತ್ತು. ಗಾಂಧಿ ಗ್ರಾಮಕ್ಕಾಗಿ 20 ಎಕರೆ ಜಮೀನು ಮಂಜೂರು ಮಾಡಿದ್ದು, ಅಭಿವೃದ್ದಿ ಹೆಸರಲ್ಲಿ 19 ಮರಗಳನ್ನು ಕಡಿಯಲಾಗಿತ್ತು.
ಈ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಮರಗಳನ್ನ ಕಡಿದ ಬಳಿಕ ಅನುಮತಿಗೆ ಮನವಿ ಪತ್ರ ಕೊಟ್ಟಿದ್ದ ಪರಿಷತ್ ಸದಸ್ಯ. ಮರ ಕಡಿಸಿದ್ದ ಗ್ರಾ.ಪಂ ಅಧ್ಯಕ್ಷ ಸೇರಿ ಇತರ ಮೇಲೆ ಅರಣ್ಯ ಕಾಯ್ದೆ ಮೊಕದ್ದಮೆ ದಾಖಲು ಮಾಡಲಾಗಿದೆ.