ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೊರಗಡೆ ಫುಡ್ ತಿನ್ನಲು ಬಯಸುತ್ತಾರೆ. ಅದರಲ್ಲೂ ವಡೆ, ಬಿಸಿ ಬಿಸಿ ಬಜ್ಜಿ, ಗೋಬಿ ಮಂಚೂರಿ ಎಲ್ಲ ತಿನ್ನಲು ಬಯಸುತ್ತಾರೆ. ಆದರೆ ಅದಕ್ಕೆ ಹಾಕುವ ಎಣ್ಣೆ ಶುದ್ಧ ಇದೀಯಾ ಇಲ್ವಾ ಯಾರು ಯೋಚಿಸುವುದೆ ಇಲ್ಲ. ಅಲ್ಲಿಗೆ ಹೋಗಿ ವಿವಿಧ ತಿಂಡಿಗಳನ್ನ ಸವಿದು ಬರತ್ತೇವೆ.
ಆದರೆ ಅಲ್ಲಿ ಬಹುತೇಕ ಮಂದಿ ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಬಳಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ಬಹಳ ಅಪಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಡುಗೆ ಎಣ್ಣೆಯನ್ನು ಹೀಗೆ ಪದೇ ಪದೆ ಬಿಸಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ತಿಳಿದುಕೊಳ್ಳೊಣ..
* ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸಿದರೆ ಅದರಲ್ಲಿ ವಿಷಕಾರಿ ವಸ್ತುಗಳು ರೂಪುಗೊಳ್ಳುತ್ತವೆ.
* ದೇಹವು ತೀವ್ರವಾಗಿ ಹಾನಿಗೊಳಗಾಗುತ್ತದೆ. ವಾಸ್ತವವಾಗಿ, ಖಾದ್ಯ ತೈಲವನ್ನು ಮರುಬಳಕೆ ಮಾಡುವುದರಿಂದ ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.
*ಮುಂದಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಅಪಾಯಕಾರಿ, ಮಾರಣಾಂತಿಕ ಕಾಯಿಲೆಗಳು ಬರುತ್ತದೆ.
*ದೇಹದಲ್ಲಿ ಕೊಬ್ಬಿನಾಮ್ಲಗಳು ಮತ್ತು ರಾಡಿಕಲ್‌ಗಳನ್ನು ಬಿಡುಗಡೆ ಮಾಡುತ್ತದೆ.
* ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
*ವಿಷಕಾರಿ ಅಂಶದಿಂದ ಆಸಿಡಿಟಿ, ಎದೆ ಉರಿ, ಗಂಟಲಿನ ಸಮಸ್ಯೆ ಹೆಚ್ಚಾಗುತ್ತದೆ.