ಬೆಂಗಳೂರು: ಬಿಎಡ್ ಕೋರ್ಸ್ ಗೆ ದಾಖಲಾತಿಗೆ ಸಂಬಂಧಿಸಿದಂತ ಈಗಾಗಲೇ ಮೊದಲ, ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈಗ ಮೂರನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಈ ಕುರಿಕಂತೆ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಬಿಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ 3ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ದಿನಾಂಕ 24-01-2024ರ ಇಂದು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು, ದಾಖಲಾತಿ ಶುಲ್ಕವನ್ನು ಎಸ್ ಬಿಐ ಬ್ಯಾಂಕಿನಲ್ಲಿ ಪಾವತಿಸಿ, ದಿನಾಂಕ 30-01-2024ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್ ನಲ್ಲಿ ಸಲ್ಲಿಸಿ, ಪ್ರವೇಶ ಪತ್ರವನ್ನು ಪಡೆಯುವಂತೆ ತಿಳಿಸಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.schooleducation.karnataka.gov.in ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿ ಎಂದಿದ್ದಾರೆ.
BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ
ಶಕ್ತಿ ಯೋಜನೆಯಡಿ ಇದುವರೆಗೆ 139.36ಕೋಟಿ ಹೆಣ್ಣು ಮಕ್ಕಳ ಪ್ರಯಾಣ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್