ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದ್ರಾಕ್ಷಿ ಹಣ್ಣಿನ ಸೀಸನ್ ಶುರುವಾಗುತ್ತಿದೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗುವ ಹೊತ್ತಿನಲ್ಲಿ ಮಾರ್ಕೆಟ್‌ನಲ್ಲಿ ದ್ರಾಕ್ಷಿ ಹಣ್ಣು ಕಾಣಿಸಿಕೊಳ್ಳುತ್ತಿವೆ. ಸ್ವಲ್ಪ ಹುಳಿ ಮುಂದೆ ಇರುವ ಈ ಹಣ್ಣು ಸವಿಯಲು ಬಲು ರುಚಿ. ಬಿಸಿಲು ಹೆಚ್ಚಾದಂತೆ ದ್ರಾಕ್ಷಿ ಹಣ್ಣಿನ ಸಿಹಿ ಕೂಡ ಹೆಚ್ಚಾಗುತ್ತದೆ. ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂದು ತಿಳಿದುಕೊಳ್ಳೋಣ.
ದ್ರಾಕ್ಷಿ ಹಣ್ಣು ಸೇವಿಸಿದರೆ ದೇಹದ ತೂಕ ಇಳಿಯುತ್ತದೆ. ನಿತ್ಯದ ವ್ಯಾಯಾಮ ಮಾಡುತ್ತಾ ಸೀಸನ್ ಇದ್ದ ಸಮಯದಲ್ಲಿ ನಿತ್ಯವೂ ದ್ರಾಕ್ಷಿ ಹಣ್ಣು ಸೇವಿಸಿದರೆ ದೇಹ ತೂಕವನ್ನು ಮತ್ತಷ್ಟು ವೇಗವಾಗಿ ಇಳಿಸಿಕೊಳ್ಳಬಹುದು.
ದ್ರಾಕ್ಷಿ ಹಣ್ಣಿನಲ್ಲಿ ಅತ್ಯಂತ ಹೇರಳ ಪ್ರಮಾಣದಲ್ಲಿ ಖನಿಜಾಂಶ ಹಾಗು ನಾರಿನಾಂಶ ಇದೆ. ಈ ಹಣ್ಣನ್ನು ಸೇವಿಸಿದೆ ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ತೊಂದರೆ ಇದ್ದವರು ನಿತ್ಯವೂ ದ್ರಾಕ್ಷಿ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು.
ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಸೀಸನ್‌ನಲ್ಲಿ ಈ ಹಣ್ಣು ತಿಂದರೆ ನಿಮಗೆ ದೀರ್ಘ ಕಾಲದವರೆಗೂ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ಆರೋಗ್ಯ ಕೆಡುವ ಸಂಭವ ತೀರಾ ಕಡಿಮೆ ಇರುತ್ತದೆ ಹಾಗು ಒಂದು ವೇಳೆ ಅನಾರೋಗ್ಯವಾದರೆ ನಿಮ್ಮಲ್ಲಿನ ರೋಗನಿರೋಧಕ ಶಕ್ತಿಯಿಂದ ಬೇಗನೆ ವಾಸಿ ಮಾಡಿಕೊಳ್ಳಬಹುದು. ಹಾಗಾಗಿ ಮಿಸ್ ಮಾಡದೇ ದ್ರಾಕ್ಷಿ ಹಣ್ಣನ್ನು ಸೇವಿಸಿ. ಕೊರೊನಾದಂತಹ ಸಾಂಕ್ರಾಮಿಕ ಕಾಲದಲ್ಲಿ ಈ ಹಣ್ಣು ಸೇವನೆ ಅತ್ಯಂತ ಸೂಕ್ತ.
ದ್ರಾಕ್ಷಿ ಹಣ್ಣು ಸೇವಿಸಿದರೆ ದೇಹದಲ್ಲಿನ ಬ್ಯಾಡ್ ಕೊಲೆಸ್ಟ್ರಾಲ್‌ನ್ನು ಹೊರ ಹಾಕುತ್ತದೆ. ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಆಚೆ ಹೋದರೆ ಹೃದಯ ಉತ್ತಮ ಕಾರ್ಯ ಚಟುವಟಿಕೆಯಲ್ಲಿರುತ್ತದೆ. ಹಾಗಾಗಿ ಹೃದಯದ ಎಲ್ಲಾ ರೀತಿಯ ಆರೋಗ್ಯವನ್ನು ಇದು ಕಾಪಾಡುತ್ತದೆ. ಅಷ್ಟೇ ಅಲ್ಲದೇ ದ್ರಾಕ್ಷಿ ಹಣ್ಣು ಸೇವಿಸಿದರೆ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಜೊತೆಗೆ ಹೃದಯ ಹಾಗು ರಕ್ತನಾಳದ ಸಮಸ್ಯೆಗಳಿಂದ ದೂರವಿರಿಸುತ್ತದೆ.
ದ್ರಾಕ್ಷಿ ಹಣ್ಣಿನಲ್ಲಿ ನೀರಿ ಅಂಶ ಹೆಚ್ಚಿರುತ್ತದೆ. ಇದನ್ನು ಸೇವಿಸುವ ಮೂಲಕ ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿದೂಗಿಸಿಕೊಳ್ಳಬಹುದು. ಮತ್ತು ಇದು ದೇಹಕ್ಕೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಮೂಲಕ ದೇಹವನ್ನು ಸದೃಢವಾಗಿರಿಸುತ್ತದೆ. ಅಲ್ಲದೇ ದೇಹದಲ್ಲಿ ಅನಗತ್ಯ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
ವಿಶೇಷವಾದ ಸೂಚನೆ: ದ್ಷಾಕ್ಷಿ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಹೇರಳವಾಗಿರುತ್ತದೆ. ಹಾಗಾಗಿ ಮಧುಮೇಹಿಗಳು ಸ್ವಲ್ಪ ಈ ವಿಷಯವಾಗಿ ಎಚ್ಚರ ವಹಿಸಬೇಕು. ಸೀಸನ್‌ನಲ್ಲಿ ಆಗಾಗ ತೀರಾ ಮಿತಿಯಲ್ಲಿ ದ್ರಾಕ್ಷಿ ಹನ್ಣು ತಿನ್ನಲು ಅಡ್ಡಿಯಿಲ್ಲ. ಇಲ್ಲದಿದ್ದರೆ ನಿಮ್ಮ ವೈದ್ಯರ ಸಲಹೆ ಮೇರೆಗೆ ಈ ಹಣ್ಣು ಸೇವಿಸುವುದು ಉತ್ತಮ.