ಬೆಂಗಳೂರು: ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಳಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವೇ ನಡೆಯಬೇಕಿತ್ತು. ಆದರೇ ಮೋಡಕವಿತ ವಾತಾವರಣದ ಹಿನ್ನಲೆಯಲ್ಲಿ ಇತಿಹಾಸದಲ್ಲಿ ಮೂರನೇ ಬಾರಿಗೆ ಎನ್ನುವಂತೆ ಗವಿಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಇಂದು ಸ್ಪರ್ಶಿಸಲು ಸಾಧ್ಯವಾಗಲಿಲ್ಲ.
ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಬೇಕಿತ್ತು. ಇದು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನದಂದೇ ವಿಸ್ಮಯ ಹಾಗೂ ಕೌತುಕ ಘಟನೆ ಕೂಡ ಆಗಿತ್ತು. ಇ
ಇಂದು ಸಂಜೆ 5.114 ರಿಂದ 5.17 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಬೇಕಿತ್ತು. ಸುಮಾರು ಮೂರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಗಂವಿ ಗಂಗಾಧರೇಶ್ವರ ಮೂರ್ತಿಯನ್ನು ಸ್ಪರ್ಶಿಸುವ ನಿರೀಕ್ಷೆಯಿತ್ತು. ಈ ಸೂರ್ಯ ರಶ್ಮಿಯ ಚಮತ್ಕಾರವನ್ನು ನೆರೆದಿದ್ದಂತ ನೂರಾರು ಭಕ್ತರು ಕಣ್ ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು.
ಆದರೇ ಮೋಡ ಕವಿದ ವಾತಾವರಣದಿಂದಾಗಿ ಗವಿಗಂಗಾಧರೇಶ್ವರನನ್ನು ಸೂರ್ಯ ಸ್ಪರ್ಶಿಸಲಿಲ್ಲ. ಈ ಮೂಲಕ ಇತಿಹಾಸದಲ್ಲಿ 3ನೇ ಬಾರಿಗೆ ಬಸವನಗುಡಿಯಲ್ಲಿನ ಗವಿಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ ಎಂಬುದಾಗಿ ಪುರೋಹಿತರು ತಿಳಿಸಿದರು.
ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಆರ್.ಅಶೋಕ್ ಘೋಷಣೆ