Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIGG NEWS : ಕೆನಡಾದಲ್ಲಿ ಭಾರತೀಯ ಮೂಲದ ಯೂಟ್ಯೂಬರ್ ‘ನ್ಯಾನ್ಸಿ ಗ್ರೆವಾಲ್’ ಚಾಕು ಇರಿದು ಹತ್ಯೆ!

05/03/2026 6:15 PM

BIG NEWS: ಇದೇ ಮೊದಲ ಬಾರಿಗೆ ನಾಳೆ ರಾಜ್ಯದ ‘KSRTC ಬಸ್ ನಿಲ್ದಾಣ’ಗಳಲ್ಲಿ ‘ಬಜೆಟ್ ನೇರ ಪ್ರಸಾರ’

05/03/2026 6:10 PM

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

05/03/2026 6:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇದೇ ಮೊದಲ ಬಾರಿಗೆ ನಾಳೆ ರಾಜ್ಯದ ‘KSRTC ಬಸ್ ನಿಲ್ದಾಣ’ಗಳಲ್ಲಿ ‘ಬಜೆಟ್ ನೇರ ಪ್ರಸಾರ’
KARNATAKA

BIG NEWS: ಇದೇ ಮೊದಲ ಬಾರಿಗೆ ನಾಳೆ ರಾಜ್ಯದ ‘KSRTC ಬಸ್ ನಿಲ್ದಾಣ’ಗಳಲ್ಲಿ ‘ಬಜೆಟ್ ನೇರ ಪ್ರಸಾರ’

By kannadanewsnow0905/03/2026 6:10 PM

ಬೆಂಗಳೂರು: ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು (ಶುಕ್ರವಾರ) ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಮೊತ್ತ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದೆ.

ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, ಐಪಿಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ಯು ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‌ಇಡಿ) ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಮಾರ್ಚ್ 6 ರಂದು ಬೆಳಿಗ್ಗೆ 10.15 ಗಂಟೆಯಿಂದ ಪ್ರಸಾರ ಮಾಡಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ. ಇದರ ಮೂಲಕ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿಯೇ ಈ ಮಹತ್ವದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಸ್ ನಿಲ್ದಾಣಗಳ ಮೂಲಕ ಜನಸಾಮಾನ್ಯರಿಗೆ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ತಲುಪಿಸುವ ಪ್ರಯತ್ನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಈ ನೇರ ಪ್ರಸಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

SHOCKING: ರಸ್ತೆಯಲ್ಲೇ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

Share. Facebook Twitter LinkedIn WhatsApp Email

Related Posts

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

05/03/2026 6:04 PM1 Min Read

SHOCKING: ರಸ್ತೆಯಲ್ಲೇ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

05/03/2026 5:57 PM1 Min Read

ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ – ಬಿಕಾನೆರ್ ನಡುವೆ ವಿಶೇಷ ರೈಲು ಸಂಚಾರ

05/03/2026 5:47 PM1 Min Read
Recent News

BIGG NEWS : ಕೆನಡಾದಲ್ಲಿ ಭಾರತೀಯ ಮೂಲದ ಯೂಟ್ಯೂಬರ್ ‘ನ್ಯಾನ್ಸಿ ಗ್ರೆವಾಲ್’ ಚಾಕು ಇರಿದು ಹತ್ಯೆ!

05/03/2026 6:15 PM

BIG NEWS: ಇದೇ ಮೊದಲ ಬಾರಿಗೆ ನಾಳೆ ರಾಜ್ಯದ ‘KSRTC ಬಸ್ ನಿಲ್ದಾಣ’ಗಳಲ್ಲಿ ‘ಬಜೆಟ್ ನೇರ ಪ್ರಸಾರ’

05/03/2026 6:10 PM

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

05/03/2026 6:04 PM

‘ಜಗತ್ತು ಅಸ್ಥಿರತೆ & ಅನಿಶ್ಚಿತತೆಯ ಅವಧಿ ಮೂಲಕ ಸಾಗುತ್ತಿದೆ’ : ಫಿನ್ಲ್ಯಾಂಡ್ ಅಧ್ಯಕ್ಷರೊಂದಿಗೆ ‘ಪ್ರಧಾನಿ ಮೋದಿ’ ಜಂಟಿ ಭಾಷಣ

05/03/2026 5:58 PM
State News
KARNATAKA

BIG NEWS: ಇದೇ ಮೊದಲ ಬಾರಿಗೆ ನಾಳೆ ರಾಜ್ಯದ ‘KSRTC ಬಸ್ ನಿಲ್ದಾಣ’ಗಳಲ್ಲಿ ‘ಬಜೆಟ್ ನೇರ ಪ್ರಸಾರ’

By kannadanewsnow0905/03/2026 6:10 PM KARNATAKA 1 Min Read

ಬೆಂಗಳೂರು: ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು (ಶುಕ್ರವಾರ) ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ…

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

05/03/2026 6:04 PM

SHOCKING: ರಸ್ತೆಯಲ್ಲೇ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

05/03/2026 5:57 PM

ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ – ಬಿಕಾನೆರ್ ನಡುವೆ ವಿಶೇಷ ರೈಲು ಸಂಚಾರ

05/03/2026 5:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.