Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 1:41 PM

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದೇ ಪ್ರಪ್ರಥಮ ಬಾರಿಗೆ ಅಪಘಾತದಲ್ಲಿ ಕಾಲು ಕಳೆದುಕೊಂಡ ‘KSRTC ಸಿಬ್ಬಂದಿ’ಗೆ 25 ಲಕ್ಷ ಪರಿಹಾರ ವಿತರಣೆ
KARNATAKA

ಇದೇ ಪ್ರಪ್ರಥಮ ಬಾರಿಗೆ ಅಪಘಾತದಲ್ಲಿ ಕಾಲು ಕಳೆದುಕೊಂಡ ‘KSRTC ಸಿಬ್ಬಂದಿ’ಗೆ 25 ಲಕ್ಷ ಪರಿಹಾರ ವಿತರಣೆ

By kannadanewsnow0926/04/2025 6:04 PM

 

ಬೆಂಗಳೂರು : ಇದೇ ಪ್ರಪ್ರಥಮ ಬಾರಿಗೆ ಅಪಘಾತದಲ್ಲಿ ಗಾಯಗೊಂಡು ಕಾಲು ಕಳೆದು ಕೊಂಡ ಸಿಬ್ಬಂದಿಗೆ ರೂ. 25.00 ಲಕ್ಷ ಹಾಗೂ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬಕ್ಕೆ ತಲಾ ರೂ.1.00 ಕೋಟಿಯಂತೆ ಇಬ್ಬರಿಗೆ ರೂ.2.00 ಕೋಟಿ ಹಾಗೂ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ (31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ) ರೂ.3.10 ಕೋಟಿ ಪರಿಹಾರ ವಿತರಣೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ವಿತರಣೆ ಮಾಡಿದರು.

ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಚೆಕ್ ವಿತರಿಸಿ ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಸಚಿವರು, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ. ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ಸಾರಿಗೆ ಸಿಬ್ಬಂದಿಗಳು ಹಗಲು ಇರಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಇಂದು ಉನ್ನತ ಸ್ಥಾನದಲ್ಲಿರುತ್ತದೆ. ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ಈಗಾಗಲೇ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1000 ನೌಕರಿ ನೀಡಿರುವುದಾಗಿ ತಿಳಿಸಿದರು.

ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಮತ್ತು ಇತರ ಶುಭಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿದರು.

ಹಣವಿದ್ದರೆ ಎಲ್ಲರು ನೆಂಟರೆ ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ “ಕೆಎಸ್‌ಆರ್ ಟಿಸಿ ಆರೋಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು, ರಾಜ್ಯಾದಾದ್ಯಂತ 300 ಕ್ಕೂ ಅಧಿಕ ಆಸ್ಪತ್ರೆಗಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದ್ದು, ಈವರೆಗೂ 56,000 ಕ್ಕೂ ಹೆಚ್ಚು ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದರು.

ಇದೇ ಪ್ರಪ್ರಥಮ ಬಾರಿಗೆ ನಿಗಮದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಒಳಪಟ್ಟು, ಬಲಗಾಲಿನ ಮಂಡಿಯ ಕೆಳಗೆ ಕಾಲನ್ನು ಕಳೆದುಕೊಂಡ ಸುನಿಲ್ ಕುಮಾರ್ ಬಿ.ಡಿ. ಚಾಲಕ-ಕಂ-ನಿರ್ವಾಹಕ, ಬಿಲ್ಲೆ ಸಂಖ್ಯೆ. 1624, ಅರಕಲಗೂಡು ಘಟಕ, ಹಾಸನ ವಿಭಾಗ ರವರಿಗೆ ಪರಿಹಾರವಾಗಿ ರೂ.25.00 ಲಕ್ಷಗಳನ್ನು ವಿತರಿಸಲಾಯಿತು.

ಇದಲ್ಲದೆ ಅವರಿಗೆ ದಿನಾಂಕ: 25-03-24 ರಿಂದ 09-12-24 ರವರೆಗೆ 08 ತಿಂಗಳು 14 ದಿನಗಳ ಅವಧಿಗೆ ಐ.ಓ.ಡಿ ನೀಡಲಾಗಿದೆ. ಸಂಸ್ಥೆಯ ವತಿಯಿಂದ ಪೂರ್ಣ ವೈದ್ಯಕೀಯ ವೆಚ್ಚ ರೂ.4,85,762-00 ಗಳನ್ನು ಭರಿಸಲಾಗಿದೆ ಹಾಗೂ ಸದರಿ ನೌಕರರಿಗೆ ಲಘು ಹುದ್ದೆ ನೀಡಿ ತಾಂತ್ರಿಕ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.

ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1.00 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.

ಇದುವರೆವಿಗೂ 24 ಜನ ನೌಕರರ ಕುಟುಂಬದವರಿಗೆ ತಲಾ ರೂ.1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು, ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ. 1.00 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 26 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟಾರೆ ರೂ.26 ಕೋಟಿ ಪರಿಹಾರ ನೀಡಲಾಗಿದೆ.

ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:

ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಪರಿಹಾರ ಮೊತ್ತವಾದ ರೂ.3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದುವರೆವಿಗೂ 94 ಪ್ರಕರಣಗಳಲ್ಲಿ ತಲಾ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು ನಂತರದಲ್ಲಿ ಕಾಯಿಲೆಗಳಿಂದ ಮರಣ ಹೊಂದಿದ 31 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳ ಪರಿಹಾರದ ಚೆಕ್‌ನ್ನು ಇಂದು ವಿತರಿಸಲಾಯಿತು. ಈವರೆಗೂ 125 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟು ರೂ. 12.50 ಕೋಟಿಗಳ ಪರಿಹಾರ ನೀಡಲಾಗಿದೆ.

ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ವಿ. ಅವರು ಮಾತನಾಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸುವಂತೆ ತಿಳಿಸಿದರು. ಹಣವನ್ನು ಸದುಪಯೋಗಪಡಿಸಿ ಕೊಳ್ಳಿ ಯಾರನ್ನು ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ. ಸಂಸ್ಥೆ ಸದಾ ತಮ್ಮೊಡನೆ ಇದೆ ಎಂದು ತಿಳಿಸುತ್ತಾ, ಮಾನ್ಯ ಸಚಿವರು, ಮಾನ್ಯ ಅಧ್ಯಕ್ಷರು ಮತ್ತು ಮಾನ್ಯ ಉಪಾಧ್ಯಕ್ಷರು, ಕರಾರಸಾ ನಿಗಮ ರವರ ಮಾರ್ಗದರ್ಶನದಂತೆ, ನಿಗಮದಲ್ಲಿ ಹತ್ತು ಹಲವು ಕಾರ್ಮಿಕ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಆರ್. ರಾಮಚಂದ್ರನ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ. ಸಂಸ್ಥೆ, ಡಾ. ನಂದಿನಿದೇವಿ ಭಾಆಸೇ., ನಿರ್ದೇಶಕರು (ಸಿ ಮತ್ತು ಜಾ), ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತಿರಿದ್ದರು.

ಸಿಎಂ ಸಿದ್ದರಾಮಯ್ಯ ಮಾತು ಆಘಾತ ತಂದಿದೆ, ಕೂಡಲೇ ಕ್ಷಮೆ ಯಾಚಿಸಬೇಕು: ಆರ್.ಅಶೋಕ್ ಒತ್ತಾಯ

BREAKING : ಪಾಕಿಸ್ತಾನಕ್ಕೆ ತಿರುಗುಬಾಣವಾದ ಯುದ್ಧಾಭ್ಯಾಸ : ಲ್ಯಾಂಡ್ ಆಗುತ್ತಿದ್ದಂತೆ ಹೊತ್ತಿ ಉರಿದ ವಿಮಾನ | WATCH VIDEO

Share. Facebook Twitter LinkedIn WhatsApp Email

Related Posts

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 1:41 PM2 Mins Read

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM1 Min Read

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM2 Mins Read
Recent News

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 1:41 PM

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM
State News
KARNATAKA

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5710/04/2026 1:41 PM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ಅಥವಾ ಗೃಹ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ ನಿಗದಿತ ದಿನಾಂಕದಂದು ಇಎಂಐ ಪಾವತಿಸಲು…

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.