Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING ; ‘ಅನ್ಮೋಲ್ ಬಿಷ್ಣೋಯ್, 197 ಅಕ್ರಮ ವಲಸಿಗರು ಸೇರಿ 200 ಭಾರತೀಯರು ಅಮೆರಿಕದಿಂದ ಗಡಿಪಾರು ; ನಾಳೆ ದೆಹಲಿಗೆ ವಾಪಸ್

18/11/2025 10:20 PM

ನೀವು ATM ‘ಕ್ಯಾನ್ಸಲ್ ಬಟಲ್’ ಎರಡು ಬಾರಿ ಒತ್ತಿದ್ರೆ ಏನಾಗುತ್ತೆ ಗೊತ್ತಾ.?

18/11/2025 10:06 PM

BREAKING: ಪೋಕ್ಸೋ, ಭ್ರೂಣಹತ್ಯೆ ಕೇಸ್: ಸಾಗರ ಪೊಲೀಸರಿಂದ ‘ದೂಗೂರು ಪರಮೇಶ್ವರ್’ ಅರೆಸ್ಟ್!?

18/11/2025 9:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದೇ ಮೊದಲ ಬಾರಿಗೆ ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ‘ಇಂಡಿಯಾ ಹೌಸ್’
INDIA

ಇದೇ ಮೊದಲ ಬಾರಿಗೆ ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ‘ಇಂಡಿಯಾ ಹೌಸ್’

By kannadanewsnow0926/06/2024 5:19 PM

ಮುಂಬೈ : ವಿಶ್ವ ಮಟ್ಟದಲ್ಲಿ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಪ್ಯಾರಿಸ್ ಒಲಿಂಪಿಕ್ಸ್- 2024ರ ಕಡೆಗೆ ವಿಶ್ವಾದ್ಯಂತದ ಕ್ರೀಡಾಸಕ್ತರು ಕಣ್ಣು ನೆಟ್ಟಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ “ಇಂಡಿಯಾ ಹೌಸ್” ಕಾಣಬಹುದಾಗಿದೆ.

ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ) ಸಹಭಾಗಿತ್ವ ವಹಿಸಿರುವಂಥ ರಿಲಯನ್ಸ್ ಫೌಂಡೇಷನ್ ನಿಂದ ಈ “ಇಂಡಿಯಾ ಹೌಸ್” ಪರಿಕಲ್ಪನೆ ಮೂಡಿದೆ. ಈ ಇಂಡಿಯಾ ಹೌಸ್ ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯತ್ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್ ನಲ್ಲಿ ಭಾರತದ ಸಾಧನೆಯನ್ನು ಜಗತ್ತಿನೆದುರು ತೆರೆದಿಡಲಾಗುತ್ತದೆ. ವಿಶ್ವದ ವಿವಿಧ ಅಥ್ಲೀಟ್ ಗಳು, ಗಣ್ಯರು, ಕ್ರೀಡಾ ಉತ್ಸಾಹಿಗಳು ಈ ಇಂಡಿಯಾ ಹೌಸ್ ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇನ್ನು ಭಾರತದ ನೀತಿಯನ್ನು ವ್ಯಾಖ್ಯಾನಿಸುವ ಏಕತೆ, ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವುದಕ್ಕೂ ಇದು ಸಹಕಾರಿ ಆಗುತ್ತದೆ.

ಇಂಡಿಯಾ ಹೌಸ್ ಎಂಬುದು ಯಾಕೆ ಮಹತ್ವದ್ದು ಎಂಬ ಬಗ್ಗೆ ಮಾತನಾಡಿರುವ ಐಒಎ ಸದಸ್ಯೆ , ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು , “ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಇಂಡಿಯಾ ಹೌಸ್ ಅನ್ನು ಘೋಷಿಸಲು ನಾನು ಅಪಾರ ಸಂತೋಷ ಪಡುತ್ತೇನೆ ಮತ್ತು ಇದೇ ಉತ್ಸಾಹದಿಂದ ರೋಮಾಂಚನಗೊಂಡಿದ್ದೇನೆ. ಕಳೆದ ವರ್ಷ ಭಾರತದಲ್ಲಿ ನಡೆದ ಐಒಸಿ ಅಧಿವೇಶನವು 40 ವರ್ಷಗಳಲ್ಲಿ ಮೊದಲನೆಯದು, ನಮ್ಮ ಒಲಿಂಪಿಕ್ ಪಯಣದಲ್ಲಿ ಪ್ರಮುಖ ಇದು ಮೈಲುಗಲ್ಲು. ಮತ್ತು ನಮ್ಮ ಕ್ರೀಡಾಪಟುಗಳನ್ನು ಗೌರವಿಸುವ, ನಮ್ಮ ವಿಜಯಗಳನ್ನು ಆಚರಿಸುವ, ನಮ್ಮ ಯಶೋಗಾಥೆಗಳನ್ನು- ಸಾಧನೆಗಳನ್ನು ಹಂಚಿಕೊಳ್ಳುವ ಮತ್ತು ಜಗತ್ತನ್ನು ಭಾರತಕ್ಕೆ ಸ್ವಾಗತಿಸುವ ಜಾಗವಾದ ಇಂಡಿಯಾ ಹೌಸ್ ಅನ್ನು ಪ್ರಾರಂಭಿಸುವುದರೊಂದಿಗೆ ಈ ಪ್ರಯತ್ನಕ್ಕೆ ವೇಗ ನೀಡುವುದನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ,” ಎಂದಿದ್ದಾರೆ.

“ಭಾರತಕ್ಕೆ ಒಲಿಂಪಿಕ್ ಸಂಭ್ರಮವನ್ನು ತರಬೇಕು ಎಂಬ ನೂರಾ ನಲವತ್ತು ಕೋಟಿ ಭಾರತೀಯರ ಕನಸನ್ನು ನನಸಾಗಿಸಲು ಇಂಡಿಯಾ ಹೌಸ್ ಮತ್ತೊಂದು ಹೆಜ್ಜೆಯಾಗಲಿದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ!” ಎಂದಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಮಾತನಾಡಿ , ”ರಿಲಯನ್ಸ್ ಫೌಂಡೇನ್ ಸಹಭಾಗಿತ್ವದಲ್ಲಿ ಉದ್ಘಾಟನೆ ಆಗಲಿರುವ ಇಂಡಿಯಾ ಹೌಸ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಭಿಮಾನಿಗಳು ಮತ್ತು ಕ್ರೀಡಾಪಟುಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಅಭಿಮಾನಿಗಳಿಗೆ ಮತ್ತು ಇತರ ದೇಶಗಳ ಜನರು ಭಾರತದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಮತ್ತು ಭಾರತವು ಪ್ರಮುಖ ಕ್ರೀಡಾವಳಿಗಳ ಆತಿಥೇಯ ಆಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ಇಂಡಿಯಾ ಹೌಸ್ ನಾವು ಕ್ರೀಡಾ ರಾಷ್ಟ್ರವಾಗಿ ಮತ್ತು ಒಲಿಂಪಿಕ್ ನಲ್ಲಿ ಮಾಡಿದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮ ಮತ್ತು ಭಾರತದ ಒಲಿಂಪಿಕ್ ಪಯಣಕ್ಕೆ ಚಾಲನೆ ನೀಡಿದ ಐಒಸಿ ಸದಸ್ಯೆ ನೀತಾ ಅಂಬಾನಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ,” ಎಂದಿದ್ದಾರೆ.

ಭಾರತೀಯ ಸಂಸ್ಕೃತಿ- ಪರಂಪರೆಯ ಪ್ರದರ್ಶನ

ಒಲಿಪಿಕ್ಸ್ ಕ್ರೀಡಾಕೂಟದ ಸಮಯದಲ್ಲಿ “ಪಾರ್ಕ್ ಆಫ್ ನೇಷನ್ಸ್” ಎಂದು ಹೆಸರಿಸಲಾದ ಐಕಾನಿಕ್ ಪಾರ್ಕ್ ಡೆ ಲಾ ವಿಲ್ಲೆಟ್ ನಲ್ಲಿ ಇಂಡಿಯಾ ಹೌಸ್ ಇರಲಿದ್ದು, ನೆದರ್ ಲೆಂಡ್ಸ್, ಕೆನಡಾ, ಬ್ರೆಜಿಲ್ ಮತ್ತು ಅತಿಥೇಯ ಫ್ರಾನ್ಸ್ ಸೇರಿದಂತೆ ಒಟ್ಟು 14 ಇತರ ಆತಿಥ್ಯ ಹೌಸ್ ಗಳಿಂದ ಸುತ್ತುವರಿದಿದೆ. ಇಂಡಿಯಾ ಹೌಸ್ ಎಂಬುದು ಸಂಸ್ಕೃತಿಯಿಂದ ಕಲೆ ಮತ್ತು ಕ್ರೀಡೆಗಳವರೆಗೆ ಅಡುಗೆಯ ಸತ್ಕಾರಗಳು ಮತ್ತು ಯೋಗ, ಕರಕುಶಲ ವಸ್ತುಗಳು, ಸಂಗೀತ, ಭಾರತೀಯ ನೃತ್ಯ ಗುಂಪುಗಳಿಂದ ಪ್ರದರ್ಶನಗಳು ಮತ್ತಿತರ ಅನುಭವಗಳನ್ನು ಅಭಿಮಾನಿಗಳಿಗೆ ದೊರಕಿಸುತ್ತದೆ. ಈ ಮೂಲಕ ಜಗತ್ತಿಗೆ ಭಾರತದ ಪ್ರತಿಭೆ, ಸಾಮರ್ಥ್ಯ ಮತ್ತು ಮಹತ್ವಾಕಾಂಕ್ಷೆಯ ಒಂದು ನೋಟವನ್ನು ನೀಡುತ್ತದೆ.

ಭಾರತೀಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಮನೆಯಿಂದ ದೂರ

ಇಂಡಿಯಾ ಹೌಸ್ ಭಾರತದ ವಿಜಯಗಳು ಮತ್ತು ಪದಕ ಗೆಲುವುಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸಂದರ್ಶಕರು, ಕ್ರೀಡಾ ದಂತಕಥೆಗಳೊಂದಿಗೆ ಮಾತುಕತೆ ನಡೆಸಲು ಮತ್ತು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಸ್ನೇಹಿತರೊಂದಿಗೆ ಪ್ರಮುಖ ಘಟನೆಗಳನ್ನು ಸ್ಮರಣೀಯವಾಗಿಸುವ ಗಮ್ಯಸ್ಥಾನವಾಗಿದೆ. ಇದು ಎಲ್ಲಾ ದೇಶಗಳ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ. ಪ್ರಮುಖ ಭಾರತೀಯ ಕಾರ್ಯಕ್ರಮಗಳ ಸಂಭ್ರಮಾಚರಣೆಯನ್ನು ಇಂಡಿಯಾ ಹೌಸ್‌ನಲ್ಲಿ ಭಾರತದಲ್ಲಿ ಒಲಂಪಿಕ್ ಗೇಮ್ಸ್‌ನ ವಿಶೇಷ ಮಾಧ್ಯಮ ಹಕ್ಕುದಾರರಾದ ವಯಾಕಾಮ್18 ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA)ನ ಪ್ರಮುಖ ಪಾಲುದಾರರಾಗಿ ರಿಲಯನ್ಸ್ ಫೌಂಡೇಷನ್ ಸ್ಥಾಪಿಸಿದ ಇಂಡಿಯಾ ಹೌಸ್ ಎಂಬುದು ಜಾಗತಿಕವಾಗಿ ಭಾರತೀಯ ಕ್ರೀಡೆಗಳನ್ನು ಉನ್ನತ ಸ್ಥಾನಕ್ಕೆ ಒಯ್ಯುವ ಸಾಮೂಹಿಕ ಪ್ರಯತ್ನವನ್ನು ಪ್ರತಿನಿಧಿಸುತ್ತದೆ.

ಪ್ಯಾರಿಸ್ 2024 ರ ಒಲಿಂಪಿಕ್ಸ್‌ ಅನ್ನು ಭಾರತದಲ್ಲಿ ನೋಡುವುದಕ್ಕೆ ವಯಾಕಾಮ್ 18- ಪ್ರಸಾರ ಮಾಡಲಿದೆ. ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್18 ನೆಟ್‌ವರ್ಕ್‌ನಾದ್ಯಂತ ಒಲಂಪಿಕ್ ಗೇಮ್ಸ್ ಪ್ಯಾರಿಸ್ 2024ರ ಅತ್ಯುತ್ತಮ ದರ್ಜೆಯ ಪ್ರಸಾರ ಕಾಣಬಹುದು.

‘ಚನ್ನಪಟ್ಟಣ ಉಪಚುನಾವಣೆ’ಯಲ್ಲಿ ಯಾರು ಅಭ್ಯರ್ಥಿ ಗೊತ್ತಾ? ಅಚ್ಚರಿಯ ಹೇಳಿಕೆ ನೀಡಿದ ‘HDK’

ಜುಲೈ 2ನೇ ವಾರದಲ್ಲಿ ಬೆಂಗಳೂರಿನ ‘ಯಲಹಂಕದ ಅನಿಲ ವಿದ್ಯುತ್ ಘಟಕ’ ಲೋಕಾರ್ಪಣೆ: ಸಚಿವ ಕೆ.ಜೆ ಜಾರ್ಜ್

Share. Facebook Twitter LinkedIn WhatsApp Email

Related Posts

BREAKING ; ‘ಅನ್ಮೋಲ್ ಬಿಷ್ಣೋಯ್, 197 ಅಕ್ರಮ ವಲಸಿಗರು ಸೇರಿ 200 ಭಾರತೀಯರು ಅಮೆರಿಕದಿಂದ ಗಡಿಪಾರು ; ನಾಳೆ ದೆಹಲಿಗೆ ವಾಪಸ್

18/11/2025 10:20 PM1 Min Read

ನೀವು ATM ‘ಕ್ಯಾನ್ಸಲ್ ಬಟಲ್’ ಎರಡು ಬಾರಿ ಒತ್ತಿದ್ರೆ ಏನಾಗುತ್ತೆ ಗೊತ್ತಾ.?

18/11/2025 10:06 PM2 Mins Read

BREAKING : ಅಕ್ರಮ ಹಣ ವರ್ಗಾವಣೆ ಪ್ರಕರಣ ; ಅಲ್ ಫಲಾಹ್ ವಿವಿ ಸ್ಥಾಪಕ ‘ಜವಾದ್ ಅಹ್ಮದ್ ಸಿದ್ದಿಕಿ’ ಅರೆಸ್ಟ್

18/11/2025 9:32 PM1 Min Read
Recent News

BREAKING ; ‘ಅನ್ಮೋಲ್ ಬಿಷ್ಣೋಯ್, 197 ಅಕ್ರಮ ವಲಸಿಗರು ಸೇರಿ 200 ಭಾರತೀಯರು ಅಮೆರಿಕದಿಂದ ಗಡಿಪಾರು ; ನಾಳೆ ದೆಹಲಿಗೆ ವಾಪಸ್

18/11/2025 10:20 PM

ನೀವು ATM ‘ಕ್ಯಾನ್ಸಲ್ ಬಟಲ್’ ಎರಡು ಬಾರಿ ಒತ್ತಿದ್ರೆ ಏನಾಗುತ್ತೆ ಗೊತ್ತಾ.?

18/11/2025 10:06 PM

BREAKING: ಪೋಕ್ಸೋ, ಭ್ರೂಣಹತ್ಯೆ ಕೇಸ್: ಸಾಗರ ಪೊಲೀಸರಿಂದ ‘ದೂಗೂರು ಪರಮೇಶ್ವರ್’ ಅರೆಸ್ಟ್!?

18/11/2025 9:48 PM

BREAKING : ಅಕ್ರಮ ಹಣ ವರ್ಗಾವಣೆ ಪ್ರಕರಣ ; ಅಲ್ ಫಲಾಹ್ ವಿವಿ ಸ್ಥಾಪಕ ‘ಜವಾದ್ ಅಹ್ಮದ್ ಸಿದ್ದಿಕಿ’ ಅರೆಸ್ಟ್

18/11/2025 9:32 PM
State News
KARNATAKA

BREAKING: ಪೋಕ್ಸೋ, ಭ್ರೂಣಹತ್ಯೆ ಕೇಸ್: ಸಾಗರ ಪೊಲೀಸರಿಂದ ‘ದೂಗೂರು ಪರಮೇಶ್ವರ್’ ಅರೆಸ್ಟ್!?

By kannadanewsnow0918/11/2025 9:48 PM KARNATAKA 1 Min Read

ಶಿವಮೊಗ್ಗ: ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಪೋಕ್ಸೋ, ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿಯಾಗಿದ್ದಂತ ದೂಗೂರು ಪರಮೇಶ್ವರ್ ಅವರನ್ನು…

ಗಮನಿಸಿ : ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

18/11/2025 9:13 PM

ಜಾತಿಗಣತಿ ಸಮೀಕ್ಷೆ ಬಗ್ಗೆ ಸುಳ್ಳು ಮಾಹಿತಿ ಸೃಜಿಸಿ, ಹಂಚಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಕೇಸ್: ಆಯೋಗ ಎಚ್ಚರಿಕೆ

18/11/2025 8:52 PM

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

18/11/2025 8:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.