ಮಂಡ್ಯ : ಶ್ರೀ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಡೀ ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಸುರಕ್ಷಿತ ಸಾಮಗ್ರಿ ವಿತರಣೆ ಮತ್ತು ಅಧಿಕಾರಿ ಹಾಗೂ ನೌಕರರಿಗೆ ಆರೋಗ್ಯ ವಿಮಾ ಯೋಜನೆಗೆ ಮದ್ದೂರು ಪಟ್ಟಣದ ನಿಗಮದ ವಿಭಾಗೀಯ ಕಚೇರಿಯಲ್ಲಿ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಸೆಸ್ಕಾಂ ಅಧ್ಯಕ್ಷ, ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುನಿ ಗೋಪಾಲರಾಜು ಅವರುಗಳು ಮೈಸೂರಿನ ಸೆಸ್ಕ್ ಕಛೇರಿಯಲ್ಲಿ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮವನ್ನು ವರ್ಚೂವೆಲ್ ಮೂಲಕ ವಿಕ್ಷೀಸಿದ ವಿಭಾಗೀಯ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯೋಜನೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದರು.
ಬಳಿಕ ವಿಭಾಗೀಯ ಕಚೇರಿಯಲ್ಲಿ ಸುಮಾರು 130 ಮಂದಿ ಪವರ್ ಮ್ಯಾನ್ ಗಳಿಗೆ ವಿಧ್ಯುತ್ ಅವಘಡ ರಕ್ಷಣಾ ಸಾಮಾಗ್ರಿ ಮತ್ತು 215 ಮಂದಿ ಅಧಿಕಾರಿಗಳು ಮತ್ತು ನೌಕರರಿಗೆ ಆರೋಗ್ಯ ವಿಮಾ ಕಾರ್ಡ್ ಗಳನ್ನು ವಿಭಾಗೀಯ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ರಮೇಶ್
ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಎಇಇ ರಮೇಶ್ ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ ಉಂಟಾದಾಗ ಪವರ್ ಮ್ಯಾನ್ ಗಳು ದುರಸ್ಥಿ ಕಾರ್ಯಕ್ಕೆ ತೆರಳುವಾಗ ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ನಿಗಮ ನೀಡಿರುವ ಸುರಕ್ಷಿತ ಸಾಮಗ್ರಿಗಳನ್ನು ಉಪಯೋಗಿಸಿಕೊಳ್ಳಬೇಕು ದುರಸ್ಥಿ ಕೆಲಸ ಮಾಡುವಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದೇ ಎನ್ನುವುದನ್ನು ಖಚಿತ ಪಡಿಸಿಕೊಂಡ ನಂತರವೇ ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಇತ್ತಿಚಿನ ದಿನಗಳಲ್ಲಿ ವಿದ್ಯುತ್ ಅವಘಡಗಳಲ್ಲಿ ಪವರ್ ಮ್ಯಾನ್ ಗಳು ಮೃತ ಪಟ್ಟು ಮತ್ತು ಗಾಯಗೊಂಡಿರುವ ಅನೇಕ ಪ್ರಕರಣಗಳು ಜರುಗಿವೆ. ಇದರಿಂದ ತಮ್ಮ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇರುತ್ತದೆ. ಇದರಿಂದ ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ಆದಷ್ಟು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ರಮೇಶ್ ಹೇಳಿದರು.
ವಿದ್ಯುತ್ ಪ್ರಸರಣ ನಿಗಮದ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವು ಮಾತನಾಡಿ, ವಿದ್ಯುತ್ ಸುರಕ್ಷಿತ ಸಾಮಗ್ರಿ ಮತ್ತು ನೌಕರರ ಆರೋಗ್ಯ ವಿಮಾ ಕಾರ್ಡ್ ಜಾರಿಗೆ ತರುವಂತೆ ನಿಗಮದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹಕ್ಕೋತ್ತಾಯಗಳನ್ನು ಮಂಡಿಸಲಾಗಿತ್ತು. ಆನಂತರ ನೌಕರರ ಸಂಘದ ಅಧ್ಯಕ್ಷ ಕೆ.ಬಲರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವರಾಮ್ ನೇತ್ರತ್ವದಲ್ಲಿ ಸಂಘದ ನಿರ್ದೇಶಕ ನಿಯೋಗ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಮುನಿ ಗೋಪಾಲರಾಜು ಅವರುಗಳನ್ನು ಭೇಟಿ ಮಾಡಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸಕಾರಾತ್ಮಕ ಸ್ಪಂದಿಸಿರುವ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಯೋಜನೆಯನ್ನು ತ್ವರಿತವಾಗಿ ಜಾರಿಗೆ ತಂದಿದ್ದಾರೆ. ಈ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್.ಶಿವಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಳಾದ ಆರ್.ಪ್ರದೀಪ್ ಕುಮಾರ್, ಎಸ್.ರಮೇಶ್, ಜೆ.ಮೋಹನ್, ಅನಿತಾ ಲೆಕ್ಕಾಧಿಕಾರಿ ಡಿ.ಸುನೀತಾ, ನೌಕರರ ಸಂಘದ ಪದಾಧಿಕಾರಿಗಳಾದ ಹೆಚ್.ಸಿ.ರಾಮಚಂದ್ರ, ಕೆ.ವಿ.ಸುರೇಶ್, ಚನ್ನೇಗೌಡ, ಸಿ.ಎಸ್.ಶ್ರೀಧರ್, ಸುಚಿತ್ ಕುಮಾರ್, ವೆಂಕಟೇಶ್, ಗಿರೀಶ್, ನಾಗರಾಜ್, ಪಿ.ವಾಸುದೇವು, ಎನ್.ಮಹದೇವಯ್ಯ, ಸೌಮ್ಯ, ಉಷಾ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ, ಐಫಾ ಪ್ರಶಸ್ತಿ ಸಮಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್