ಜಾಮ್‌ನಗರ : ಭಾರತದಲ್ಲಿ ಮೊದಲ ಬಾರಿಗೆ ಎಂಬಂತೆ ಉದ್ಯಮಿ ಅನಂತ್ ಅಂಬಾನಿ ಅವರು ಆರಂಭಿಸಿದ ವನ್ಯಜೀವಿ ರಕ್ಷಣಾ ಮತ್ತು ಸಂರಕ್ಷಣಾ ಉಪಕ್ರಮ ವಂತಾರ. ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವಂತಾರದ ಅತ್ಯಾಧುನಿಕ ಸೌಲಭ್ಯಗಳಲ್ಲಿ ಸೋಮವಾರದಂದು (ಆಗಸ್ಟ್ 18) ಸಂರಕ್ಷಣಾ ಔಷಧದ ಪರಿಚಯದ ಕುರಿತು ಪ್ರಮುಖ ಪಶುವೈದ್ಯಕೀಯ ತರಬೇತಿ ಕೋರ್ಸ್ ಅನ್ನು ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ವಿ. ಕ್ಲೆಮೆಂಟ್ ಬೆನ್, ಐಎಫ್‌ಎಸ್; ಉತ್ತರಾಖಂಡ ಸರ್ಕಾರದ ಮಾಜಿ ಪಿಸಿಸಿಎಫ್ ಮತ್ತು ಸಿಡಬ್ಲ್ಯೂಎಲ್‌ಡಬ್ಲ್ಯೂ ದಿಗ್ವಿಜಯ್ ಸಿಂಗ್ ಖಾಟಿ; ಭಾರತ ವನ್ಯಜೀವಿ ಸಂಸ್ಥೆಯ ಮಾಜಿ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪ್ರದೀಪ್ ಕೆ. ಮಲಿಕ್; ಮತ್ತು ಜಿಜೆಡ್‌ಆರ್‌ಆರ್‌ಸಿ ನಿರ್ದೇಶಕ ಡಾ. ಬ್ರಿಜ್ ಕಿಶೋರ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹೀಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣೆಯನ್ನು ಮುನ್ನಡೆಸುವಲ್ಲಿ ಈ ಮೈಲುಗಲ್ಲು ಎನಿಸಿದಂಥ ಉಪಕ್ರಮದ ಮಹತ್ವವನ್ನು ಒತ್ತಿ ಹೇಳಿದರು.
ಆಗಸ್ಟ್ 18 ರಿಂದ 20ರ ವರೆಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತದಾದ್ಯಂತದ ಪ್ರಾಣಿಸಂಗ್ರಹಾಲಯಗಳು ಮತ್ತು ವನ್ಯಜೀವಿ ಆರೈಕೆ ಸೌಲಭ್ಯಗಳ 54 ಪಶುವೈದ್ಯರು ಪಾಲ್ಗೊಳ್ಳುತ್ತಾರೆ. ಮುಂದಿನ ಎರಡು ದಿನಗಳಲ್ಲಿ, ಭಾಗವಹಿಸುವವರು ವನ್ಯಜೀವಿ ಆರೋಗ್ಯ ನಿರ್ವಹಣೆ, ತುರ್ತು ಪ್ರತಿಕ್ರಿಯೆ, ರೋಗ ಕಣ್ಗಾವಲು, ರೋಗನಿರ್ಣಯ ಮತ್ತು ಅದನ್ನು ತಡೆಗಟ್ಟುವಂಥ ಆರೋಗ್ಯ ರಕ್ಷಣೆಯಲ್ಲಿ ರಾಷ್ಟ್ರೀಯ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ತಜ್ಞರ ನೇತೃತ್ವದ ಸೆಷನ್ ಗಳು ಮತ್ತು ಪ್ರಾಯೋಗಿಕ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ಈ ಕೋರ್ಸ್ ಅನ್ನು ವಂತಾರಾದ ಪ್ರಮುಖ ತಜ್ಞರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ಸಹಯೋಗದೊಂದಿಗೆ ನಡೆಸುತ್ತಿದ್ದಾರೆ. ಈ ಕೋರ್ಸ್ ನಲ್ಲಿ ಭಾಗವಹಿಸುವವರು ಕ್ಲಾಸ್ ರೂಂ ಚರ್ಚೆಗಳು, ಕ್ಲಿನಿಕಲ್ ಪ್ರದರ್ಶನಗಳು ಮತ್ತು ವಂತಾರಾದ ಮುಂದುವರಿದ ಸೌಲಭ್ಯಗಳಲ್ಲಿ ಗಹನವಾದ ಕ್ಷೇತ್ರ ಅನುಭವಗಳ ಮೂಲಕ ಕಲಿಯುತ್ತಾರೆ, ಇದರಲ್ಲಿ ವನ್ಯಜೀವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಚಿರತೆ ಸಂರಕ್ಷಣಾ ಕೇಂದ್ರ, ಆನೆ ಆರೈಕೆ ಕೇಂದ್ರ ಮತ್ತು ಸಸ್ಯಾಹಾರಿ ಪ್ರಾಣಿಗಳಿಗಾಗಿ ರಕ್ಷಣಾ ಕೇಂದ್ರ ಸೇರಿವೆ.
ಡಾ. ಬ್ರಿಜ್ ಕಿಶೋರ್ ಗುಪ್ತಾ ಅವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ , “ವನ್ಯಜೀವಿ ಸಂರಕ್ಷಣೆಗೆ ಮೀಸಲಾಗಿರುವ ಬಲಿಷ್ಠ ಪಶುವೈದ್ಯಕೀಯ ಜಾಲವನ್ನು ನಿರ್ಮಿಸುವ ವಂತಾರದ ಬದ್ಧತೆಯನ್ನು ಈ ಕಾರ್ಯಕ್ರಮವು ಒತ್ತಿಹೇಳುತ್ತದೆ. ಪಶುವೈದ್ಯರನ್ನು ಪ್ರಾಯೋಗಿಕ ಪರಿಣತಿ ಮತ್ತು ಜಾಗತಿಕ ಅತ್ಯುತ್ತಮ ಪದ್ಧತಿಗಳಿಗೆ ತೆರೆದುಕೊಳ್ಳುವ ಮೂಲಕ, ಪ್ರಾಣಿಗಳ ದೀರ್ಘಕಾಲೀನ ಆರೈಕೆಯನ್ನು ಹೆಚ್ಚಿಸುವ ಮತ್ತು ಭಾರತದ ಶ್ರೀಮಂತ ಜೀವವೈವಿಧ್ಯವನ್ನು ರಕ್ಷಿಸಲು ಅರ್ಥಪೂರ್ಣವಾಗಿ ಕೊಡುಗೆ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಪಶುವೈದ್ಯಕೀಯ ಆರೈಕೆಯನ್ನು ಮುನ್ನಡೆಸಲು, ವೈಜ್ಞಾನಿಕ ವನ್ಯಜೀವಿ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರವ್ಯಾಪಿ ಸರ್ಕಾರದ ನೇತೃತ್ವದ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಲು ವಂತಾರದ ಪ್ರಮುಖ ಉಪಕ್ರಮವಾದ ಹೀಲಿಂಗ್ ದಿ ವೈಲ್ಡ್ ಅಡಿಯಲ್ಲಿ ಈ ತರಬೇತಿಯನ್ನು ನಡೆಸಲಾಗುತ್ತಿದೆ. ಈ ತರಬೇತಿ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಗುರುತಿಸಲು ಆಗಸ್ಟ್ 20 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಎಲ್ಲ ಪಶುವೈದ್ಯರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಗುವುದು.
BREAKING: ‘ಬಾಲಿವುಡ್ ಖ್ಯಾತ ಗಾಯಕ ಲಕ್ಕಿ ಆಲಿ’ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಧರ್ಮಸ್ಥಳ ಕೇಸ್; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸಿಎಂ ಸೂಚನೆ- ಡಿಸಿಎಂ ಡಿಕೆಶಿ