ಬೆಂಗಳೂರು: ಬೆಂಗಳೂರಲ್ಲಿ ಮೊಟ್ಟಲ ಮೊದಲ ಬಾರಿ ಎನ್ನುವಂತೆ ಉದ್ಯಮಿಯೊಬ್ಬರಿಂದ ಹಣ ಪಡೆದು ಪರಾರಿಯಾಗಿದ್ದಂತ ನಾಲ್ವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ಬಂಧಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ದಿನಾಂಕ:09-09-2024 ರಂದು ಸಂಜೆ 16-35 ಗಂಟೆಗೆ ಪಿರಾದುದಾರರಾದ ಕೇಶವ್ ಟಾಕ್ ರವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, Mexo Solutions Private Limited having its address at L4, 2nd Floor, 11th Sector, Jeevan Bhimanagar Main Road, Bengaluru-560075 0 ಮಾಡಿಕೊಂಡಿರುತ್ತೇನೆ. ದಿನಾಂಕ:30-08-2024 ರಂದು 8-30 ರಿಂದ 9-00 ಗಂಟೆ ನಡುವೆ ಅಪರಿಚಿತ ವ್ಯಕ್ತಿಗಳು ತಾವು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು, ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮ ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ನನ್ನನ್ನು ಪವನ್ ತಕ್, ಮುಖೇಶ್ ಜೈನ್, ರಾಕೇಶ್ ಮಾಣಕ್ ಚಾಂದನಿ ರವರುಗಳನ್ನು ಬಲವಂತವಾಗಿ ಮನೆಯಿಂದ ಎಳೆದುಕೊಂಡು ಬಂದು ಮಹೀಂದ್ರಾ ಎಕ್ಸ್ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರುಗಳಲ್ಲಿ ಕೂರಿಸಿಕೊಂಡು ನಾನು ಕೆಲಸ ಮಾಡುತ್ತಿರುವ ಕಛೇರಿಗೆ ಬಂದು ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮಗಳನ್ನು ಪ್ರತ್ಯೇಕ ರೂಂಗಳಲ್ಲಿ ಕೂಡಿ ಹಾಕಿರುತ್ತಾರೆ ಎಂದು ದೂರಿನ ಸಾರಾಂಶ ತಿಳಿಸಿದೆ.
ನಂತರ ಮತ್ತೊಬ್ಬ ವ್ಯಕ್ತಿ ತಾನು ಮನೋಜ್ ಸೀನಿಯರ್ ಜಿಎಸ್ ಆಫೀಸರ್ ಎಂದು ಹೇಳಿ ಇತರರೊಂದಿಗೆ ನಮ್ಮನ್ನು ಇಂದಿರಾನಗರಕ್ಕೆ ಅವರ ಕಾರಿನಲ್ಲಿ ಕರೆದುಕೊಂಡು ನನ್ನ ಮೊಬೈಲ್ ಫೋನ್ ಅನ್ನು ಫ್ರೆಟ್ ಮೋಡ್‌ಗೆ ಹಾಕಿ, ಹಾಟ್‌ಸ್ಪಾಟ್ ಮೂಲಕ ಇಂಟರ್‌ನೆಟ್ ಅನ್ನು ಕಲೆಕ್ಟ್ ಮಾಡಿರುತ್ತಾರೆ. ಅವರು ತಿಳಿಸಿದಂತೆ ನಾನು ರೋಷನ್ ಜೈನ್ ಎಂಬಾತನಿಗೆ ವಾಟ್ಸಾಪ್ ಕರೆ ಮಾಡಿಸಿ 03 ಕೋಟಿ ರೂಗಳನ್ನು ತಂದುಕೊಡುವಂತೆ ಹೇಳಿರುತ್ತೇನೆ. ನಂತರ ಅವರುಗಳು ನನ್ನನ್ನು ನಾನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಂತರ ದಿನಾಂಕ:31-08-2024 ರಂದು ಬೆಳಿಗ್ಗೆ 10-30 ಗಂಟೆಗೆ ಸದರಿ ವ್ಯಕ್ತಿಗಳು ನನ್ನನ್ನು ಅವರ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮತ್ತು ವಾಪಸ್ ಕರೆದುಕೊಂಡು ಬಂದಿರುತ್ತಾರೆ. ಅದೇ ರೀತಿ ನನ್ನ ಸ್ನೇಹಿತ ರೋಷನ್‌ಗೆ ಕರೆ ಮಾಡಿಸಿ ಹಣವನ್ನು ತಂದು ಕೊಡುವಂತೆ ಒತ್ತಾಯ ಮಾಡಿರುತ್ತಾರೆ. ಹಣವನ್ನು ತಂದು ಕೊಡಲು ತಡ ಮಾಡಿದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದು ತಿಳಿಸಿದೆ.
ದಿನಾಂಕ:31-08-2024 ರಂದು ರೋಷನ್ ಹಣವನ್ನು ಅರೇಂಜ್ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಗಳು ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ. ನಂತರ ರೋಷನ್ ಜೈನ್ ರವರು ಅಂಗಾಡಿಯ ಮೂಲಕ 1.5 ಕೋಟಿ ರೂಗಳನ್ನು ಅರೇಂಜ್ ಮಾಡಿ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವಂತೆ ತಿಳಿಸಿರುತ್ತಾರೆ. ಅದರಂತೆ ಸದರಿ ಹಣವನ್ನು ಮುಖೇಶ್ ಜೈನ್ ದಿನಾಂಕ:01-09-2024 ರಂದು ಬೆಳಗ್ಗಿನ ಜಾವ 2-30 ಗಂಟೆಯ ಸಮಯದಲ್ಲಿ ತೆಗೆದುಕೊಂಡು ಬರಲು ಹೋದಾಗ ನಮ್ಮಲ್ಲಿ 4 ಜನರಲ್ಲಿ ಮೂವರನ್ನು ಕಳುಹಿಸಿಕೊಟ್ಟಿರುತ್ತಾರೆ. ಇದಾದ ನಂತರ ಹಣವನ್ನು ಪಡೆದುಕೊಂಡು ದಾಖಲಾತಿಗಳನ್ನು ಸಿದ್ದಪಡಿಸಿ ನಮ್ಮಗಳ ಸಹಿಯನ್ನು ಪಡೆದುಕೊಂಡಿರುತ್ತಾರೆ. ಸದರಿ ಆಸಾಮಿಗಳು ಹೋಗುವಾಗ ಮಹಜರ್ ದಾಖಲಾತಿಗಳನ್ನು ಬಿಟ್ಟು ಹೋಗಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ನಂತರ ನಾನು ದಿನಾಂಕ:02-09-2024 ರಿಂದ ದಿನಾಂಕ:03-09-2024 ರವರೆಗೆ ಮೇಲ್ಕಂಡ ಘಟನೆಯ ನೈಜತೆಯ ಬಗ್ಗೆ ವಿವಿಧ ಅಧಿಕಾರಿಗಳನ್ನು ವಿಚಾರಿಸಿರುತ್ತೇನೆ. ಸದರಿ ಆಸಾಮಿಗಳು ತಾವುಗಳು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ನನ್ನನ್ನು ಬೆದರಿಸಿ ಹಣ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂತರ ಸಿಸಿಬಿ ತನಿಖೆಗೆ ನೀಡಲಾಗಿರುತ್ತದೆ ಎಂದಿದೆ.
ಈ ಪ್ರಕರಣದ ತನಿಖೆಯಲ್ಲಿ ಮೇಲೆ ಹೇಳಿರುವಂತೆ ಘಟನೆಯು ನಡೆದಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣವನ್ನು ತನಿಖೆಯು ಮುಂದುವರೆದಂತೆ Director General of GST Intelligence, Bengaluru Zonal Unit (Central GST) ಘಟಕಕ್ಕೆ ಸೇರಿದ ಅಧಿಕಾರಿಗಳು ಯಾವುದೇ ಅನುಮೋದನೆ ಇಲ್ಲದೆ ದಾಳಿ ಮಾಡಿರುವುದು ಧೃಡವಾಗಿರುತ್ತದೆ. ಅಲ್ಲದೇ ಹಲವಾರು ವಸ್ತುಗಳನ್ನು ಜಪ್ತಿ ಮಾಡಿರುವುದು ಕಂಡುಬಂದಿರುತ್ತದೆ. ಇಷ್ಟೇ ಅಲ್ಲದೆ ಯಾವುದೇ ಅನುಮತಿ ಇಲ್ಲದೇ 2 ದಿನಗಳ ಕಾಲ ದೂರುದಾರರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿರುವುದು ಕಂಡುಬಂದಿರುತ್ತದೆ ಎಂದು ಹೇಳಿದೆ.
ಅದರಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ 4 ಜನ ಸೆಂಟ್ರಲ್ ಜಿ.ಎಸ್.ಟಿ ಅಧಿಕಾರಿಗಳಾದ
1. Superintendent of Central Tax, South Commissionerate, Bengaluru
Zone.
2. Senior Intelligence Officer, GST Intelligence, Bengaluru Zone.
3. Senior Intelligence Officer, GST Intelligence, Bengaluru Zone.
4. Intelligence Officer, GST Intelligence, Bengaluru Zone.
ಇವರುಗಳನ್ನು ದಿನಾಂಕ. 10.09.2024 ರಂದು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದ್ದು, ಇವರುಗಳ ವಶದಿಂದ ಹಲವಾರು ವಸ್ತುಗಳನ್ನು ಜಪ್ತಿ ಮಾಡಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯನ್ನು ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರ ತಂಡವು ಜಂಟಿಯಾಗಿ ಕೈಗೊಂಡಿರುತ್ತಾರೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಬಿಜೆಪಿ ಸರ್ಕಾರ’ದ ಹಗರಣಗಳ ತನಿಖೆ ಚುರುಕುಗೊಳಿಸಲು ‘ಸಚಿವ ಸಂಪುಟ ಉಪ ಸಮಿತಿ’ ರಚನೆ: ಸಿಎಂ ಸಿದ್ದರಾಮಯ್ಯ
ರಾಹುಲ್ ಗಾಂಧಿ ಮೀಸಲಾತಿ ರದ್ದು ಹೇಳಿಕೆ ವಿವಾದ: ನಾಳೆ ರಾಜ್ಯಾಧ್ಯಂತ ಬಿಜೆಪಿಯಿಂದ ಪ್ರತಿಭಟನೆಗೆ ಕರೆ
ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!