ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆಯು ನರಸಾಪುರ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ 8 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 07201 ನರಸಾಪುರ-ಅರಸೀಕೆರೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 6, 13, 20, 27 ಮತ್ತು ಮೇ 4, 11, 18, 25, 2025 (ಭಾನುವಾರ) ರಂದು ಮಧ್ಯಾಹ್ನ 2:20 ಕ್ಕೆ ನರಸಾಪುರದಿಂದ ಹೊರಟು, ಮರುದಿನ (ಸೋಮವಾರ) ಮಧ್ಯಾಹ್ನ 12:45ಕ್ಕೆ ಅರಸೀಕೆರೆಯನ್ನು ತಲುಪಲಿದೆ.
ರೈಲು ಸಂಖ್ಯೆ 07202 ಅರಸೀಕೆರೆ-ನರಸಾಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 7, 14, 21, 28, ಮೇ 5, 12, 19, 26, 2025 (ಸೋಮವಾರ) ರಂದು ಮಧ್ಯಾಹ್ನ 2:00 ಗಂಟೆಗೆ ಅರಸೀಕೆರೆಯಿಂದ ಹೊರಟು, ಮರುದಿನ (ಮಂಗಳವಾರ) ಮಧ್ಯಾಹ್ನ 1:00 ಗಂಟೆಗೆ ನರಸಾಪುರವನ್ನು ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಪಾಲಕೊಲ್ಲು, ಭೀಮಾವರಂ ಟೌನ್, ಅಕಿವೀಡು, ಕೈಕಾಲೂರು, ಗುಡಿವಾಡ, ವಿಜಯವಾಡ, ಗುಂಟೂರು, ನರಸರಾವ್ ಪೇಟೆ, ಮರ್ಕಾಪುರ ರೋಡ್, ಕುಂಬಂ, ಗಿಡ್ಡಲೂರು, ನಂದ್ಯಾಳ, ಧೋಣೆ, ಗೂತ್ತಿ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ರೈಲುಗಳು 1 ಎಸಿ ಟು ಟೈರ್, 2 ಎಸಿ ತ್ರಿ ಟೈರ್, 13 ಸ್ಲೀಪರ್ ಕ್ಲಾಸ್ ಮತ್ತು 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್ ಬೋಗಿಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಹೊಂದಿರುತ್ತದೆ.
ಮೋದಿ ಅವರೇ, ಹಿಂದೂಗಳಿಗೆ ‘ಯುಗಾದಿ ಕಿಟ್’ ಯಾವಾಗ ಕೊಡ್ತೀರಾ?: ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ