ಬೆಂಗಳೂರು: ಗುಂತಕಲ್ ವಿಭಾಗದ ಗುಂತಕಲ್-ಗೂತ್ತಿ ಭಾಗದ ಬುಗ್ಗಾನಿ ಸಿಮೆಂಟ್ ನಗರ, ಕೃಷ್ಣಮ್ಮ ಕೋನಾ ಮತ್ತು ಪಾಣ್ಯಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಡಿಸೆಂಬರ್ 11 ರಿಂದ 13 ರವರೆಗೆ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ. ಬದಲಾದ ಮಾರ್ಗದ ಮೂಲಕ ಚಲಿಸುವ ರೈಲುಗಳ ವಿವರ ಈ ಕೆಳಗಿನಂತಿವೆ:
1. ಡಿಸೆಂಬರ್ 6 ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ನಂದ್ಯಾಲ್, ಯರ್ರಾಗುಂಟ್ಲ, ಗೂತ್ತಿ ಫೋರ್ಟ್, ಅನಂತಪುರ ನಿಲ್ದಾಣಗಳ ಮೂಲಕ ಚಲಿಸುತ್ತದೆ. ಮಾರ್ಗ ಬದಲಾವಣೆಯಿಂದ ಡೋನ್ ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ಇರುವುದಿಲ್ಲ.
2. ಡಿಸೆಂಬರ್ 7 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22884 ಯಶವಂತಪುರ-ಪುರಿ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಅನಂತಪುರ, ಗೂತ್ತಿ ಫೋರ್ಟ್, ಯರ್ರಗುಂಟ್ಲಾ, ನಂದ್ಯಾಲ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ ಡೋನ್ ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ತಪ್ಪಿರುತ್ತದೆ.
3. ಡಿಸೆಂಬರ್ 4 ಮತ್ತು 11 ರಂದು ಹೌರಾದಿಂದ ಹೊರಡುವ ರೈಲು ಸಂಖ್ಯೆ 22831 ಹೌರಾ-ಯಶವಂತಪುರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ನಂದ್ಯಾಲ್, ಯರ್ರಾಗುಂಟ್ಲ, ಗೂತ್ತಿ ಫೋರ್ಟ್, ಅನಂತಪುರ ನಿಲ್ದಾಣಗಳ ಮೂಲಕ ಚಲಿಸುತ್ತದೆ. ಹೀಗಾಗಿ ಡೋನ್ ಮತ್ತು ಗೂತ್ತಿ ನಿಲ್ದಾಣಗಳಲ್ಲಿನ ನಿಯಮಿತ ನಿಲುಗಡೆ ತಪ್ಪಿರುತ್ತದೆ.
4. ಡಿಸೆಂಬರ್ 6 ಮತ್ತು13 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 22832 ಯಶವಂತಪುರ-ಹೌರಾ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅನಂತಪುರ, ಗೂತ್ತಿ ಫೋರ್ಟ್, ಯರ್ರಗುಂಟ್ಲಾ, ನಂದ್ಯಾಲ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ ಗೂತ್ತಿ ಮತ್ತು ಡೋನ್ ನಿಲ್ದಾಣಗಳಲ್ಲಿನ ನಿಯಮಿತ ನಿಲುಗಡೆ ತಪ್ಪಿರುತ್ತದೆ.
ರೈಲುಗಳ ಸಂಚಾರ ರದ್ದು / ಭಾಗಶಃ ರದ್ದು
ಬಂಗಾರಪೇಟೆ-ಮಾರಿಕುಪ್ಪಂ ಭಾಗದ ಮಾರಿಕುಪ್ಪಂ ಮತ್ತು ಚಾಂಪಿಯನ್ ನಿಲ್ದಾಣಗಳ ಮಧ್ಯೆ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನವೀಕರಣ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದುಗೊಳಿಸಲಾಗುತ್ತಿದೆ.
ರದ್ದು: ಡಿಸೆಂಬರ್ 7 ಮತ್ತು 14 ರಂದು ಮಾರಿಕುಪ್ಪಂ-ಬಂಗಾರಪೇಟೆ (ರೈಲು ಸಂಖ್ಯೆ 01781) ಮತ್ತು ಡಿಸೆಂಬರ್ 8 ಮತ್ತು 15 ರಂದು ಬಂಗಾರಪೇಟೆ-ಮಾರಿಕುಪ್ಪಂ ಮೆಮು (01782) ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರದ್ದು: ಡಿಸೆಂಬರ್ 7 ಮತ್ತು 14 ರಂದು ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ (ರೈಲು ಸಂಖ್ಯೆ 01771) ರೈಲು ಬಂಗಾರಪೇಟೆ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಂಗಾರಪೇಟೆಯಲ್ಲಿ ಕೊನೆಗೊಳ್ಳುತ್ತದೆ.
ಡಿಸೆಂಬರ್ 8 ಮತ್ತು 15, 2024 ರಂದು ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (01772 ) ರೈಲು ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಂಗಾರಪೇಟೆಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ.
ಚೀನಾದಲ್ಲಿ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಪತ್ತೆ | World’s largest gold reserve discovered