ಬೆಂಗಳೂರು: ಚೆನ್ನೈ ಮತ್ತು ಸೇಲಂ ವಿಭಾಗಗಳಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿ ಹಿನ್ನಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರ ರದ್ದು, ಮರು ವೇಳಾಪಟ್ಟಿ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೆಯು ಸೂಚಿಸಿದೆ.
ಭಾಗಶಃ ರದ್ದು: ಡಿಸೆಂಬರ್ 6 ರಂದು ರೈಲು ಸಂಖ್ಯೆ 12610 ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ರೈಲು ಕಟಪಾಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಬದಲು ಕಟಪಾಡಿಯಲ್ಲಿ ಕೊನೆಗೊಳ್ಳಲಿದೆ.
ಡಿಸೆಂಬರ್ 6 ರಂದು ರೈಲು ಸಂಖ್ಯೆ 12607 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ಲಾಲ್ಬಾಗ್ ಡೈಲಿ ಎಕ್ಸ್ ಪ್ರೆಸ್ ರೈಲು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಬದಲಿಗೆ ಕಟಪಾಡಿಯಿಂದ ಪ್ರಾರಂಭವಾಗಲಿದೆ. ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕಟಪಾಡಿ ನಿಲ್ದಾಣಗಳ ನಡುವಿನ ಪ್ರಯಾಣ ಭಾಗಶಃ ರದ್ದಾಗಿರುತ್ತದೆ.
ಮರು ವೇಳಾಪಟ್ಟಿ: ಡಿಸೆಂಬರ್ 11, 18 ಮತ್ತು 25 ರಂದು ಚೆನ್ನೈ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22601 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ತನ್ನ ಮೂಲ ನಿಲ್ದಾಣದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಈ ರೈಲು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ 40 ನಿಮಿಷಗಳ ಕಾಲ ನಿಯಂತ್ರಿಣಗೊಳ್ಳಲಿದೆ.
SCHOKING NEWS: 6ನೇ ತರಗತಿ ವಿದ್ಯಾರ್ಥಿಗಳ ನಡುವೆ ಜಗಳ: ಶಾಲೆಯಲ್ಲೇ ಕುಸಿದು ಬಿದ್ದು 12ರ ಬಾಲಕ ಸಾವು
BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ