ಬೆಂಗಳೂರು: ಬಂಗಾರಪೇಟೆ-ಮಾರಿಕುಪ್ಪಂ ನಿಲ್ದಾಣಗಳ ಮಧ್ಯ ಇರುವ ಸೇತುವೆಯ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, 2 ಮೆಮು ರೈಲುಗಳ ಸಂಚಾರ ರದ್ದು ಮತ್ತು 2 ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತಿದೆ. ವಿವರಗಳು ಈ ಕೆಳಗಿನಂತಿವೆ:
ಈ ಕುರಿತಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ಹಂಚಿಕೊಂಡಿದ್ದು, ಈ ಕೆಳಗಿನ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.
1. ರೈಲು ಸಂಖ್ಯೆ 66517 ಮಾರಿಕುಪ್ಪಂ-ಬಂಗಾರಪೇಟೆ ಮೆಮು ರೈಲನ್ನು ಫೆಬ್ರವರಿ 15, 22 ಮತ್ತು ಮಾರ್ಚ್ 08, 2025 ರಂದು ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ 66518 ಬಂಗಾರಪೇಟೆ-ಮಾರಿಕುಪ್ಪಂ ಮೆಮು ರೈಲನ್ನು ಫೆಬ್ರವರಿ 16, 23 ಮತ್ತು ಮಾರ್ಚ್ 09, 2025 ರಂದು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು:
1. ರೈಲು ಸಂಖ್ಯೆ 66520 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ಫೆಬ್ರವರಿ 15, 22 ಮತ್ತು ಮಾರ್ಚ್ 08, 2025 ರಂದು ಬಂಗಾರಪೇಟೆ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಂಗಾರಪೇಟೆಯಲ್ಲಿ ಕೊನೆಗೊಳ್ಳಲಿದೆ.
2. ರೈಲು ಸಂಖ್ಯೆ 66519 ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು ಫೆಬ್ರವರಿ 16, 23 ಮತ್ತು ಮಾರ್ಚ್ 09, 2025 ರಂದು ಮಾರಿಕುಪ್ಪಂ ನಿಲ್ದಾಣದ ಬದಲು ಬಂಗಾರಪೇಟೆಯಿಂದ ಹೊರಡಲಿದೆ. ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು
BREAKING : ಬೆಂಗಳೂರು ‘ಏರ್ ಶೋ-2025’ : ಪೊಲೀಸರಿಗೆ ನೀಡಿದ್ದ ಊಟದಲ್ಲಿ ನಿನ್ನೆ ಜಿರಳೆ ಇಂದು ಹುಳ ಪತ್ತೆ!