ಬೆಂಗಳೂರು : ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್ ಪ್ರಾಧಿಕಾರ 2024ರ ಜೂನ್ 14ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತ ಆಧಾರ್ ಅಪ್ಡೇಟ್ ಪ್ರಯೋಜನ ಪಡೆಯಬಹುದಾಗಿದೆ.
ಆದರೆ, ಉಚಿತ ಪರಿಷ್ಕರಣೆ ಸೇವೆಯು ಆನ್ಲೈನ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯ.
ನಿಮ್ಮ ಆಧಾರ್ ಕಾರ್ಡ್ ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸುವುದು ಹೇಗೆ.?
* ಯುಐಡಿಎಐ ಅಧಿಕೃತ ವೆಬ್ಸೈಟ್ https://uidai.gov.in ಗೆ ಭೇಟಿ ನೀಡಿ
* ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನ ನಮೂದಿಸಿ ಮತ್ತು ನಿಮ್ಮ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ‘ಸೆಂಡ್ ಒಟಿಪಿ’ ಕ್ಲಿಕ್ ಮಾಡಿ
* ಇದರ ನಂತರ ‘ಡೆಮೋಗ್ರಾಫಿಕ್ಸ್ ಡೇಟಾವನ್ನು ನವೀಕರಿಸಿ’ ಮತ್ತು ಸಂಬಂಧಿತ ಆಯ್ಕೆಯನ್ನು ಆರಿಸಿ.
* ‘ಮುಂದುವರಿಯಿರಿ’ ಕ್ಲಿಕ್ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ.
* ‘ಸಲ್ಲಿಸು’ ಕ್ಲಿಕ್ ಮಾಡುವ ಮೊದಲು ವಿವರಗಳನ್ನು ಪರಿಶೀಲಿಸಿ
ಮಾಡಿದ ಬದಲಾವಣೆಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ‘ನವೀಕರಣ ವಿನಂತಿ ಸಂಖ್ಯೆ (URN)’ನ್ನ ಬಳಸಬಹುದು.
ಜನಸಂಖ್ಯಾ ವಿವರಗಳನ್ನು ಮರುಪರಿಶೀಲಿಸಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (PoI/PoA) ದಾಖಲೆಗಳನ್ನು ಅಪ್ಲೋಡ್ ಮಾಡುವಂತೆ ಯುಐಡಿಎಐ ಆಧಾರ್ ಬಳಕೆದಾರರನ್ನು ಒತ್ತಾಯಿಸುತ್ತಿದೆ. ಆಧಾರ್ ಅನ್ನು 10 ವರ್ಷಗಳ ಹಿಂದೆ ನೀಡಿದ್ದರೆ ಮತ್ತು ಅಂದಿನಿಂದ ಎಂದಿಗೂ ನವೀಕರಿಸದಿದ್ದರೆ ಇದು ಅನ್ವಯಿಸುತ್ತದೆ.
ವಿಳಾಸ ಪುರಾವೆ ಅಪ್ಲೋಡ್ ಮಾಡುವುದು ಹೇಗೆ.?
* ಆಧಾರ್ ಸೈಟ್ ಗೆ ಭೇಟಿ ನೀಡಿ: https://myaadhaar.uidai.gov.in/
* ನಂತರ ಲಾಗ್ ಇನ್ ಮಾಡಿ ಮತ್ತು “ಹೆಸರು / ಲಿಂಗ / ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ” ಆಯ್ಕೆ ಮಾಡಿ.
* “ಆನ್ ಲೈನ್ ನಲ್ಲಿ ಆಧಾರ್ ನವೀಕರಿಸಿ” ಕ್ಲಿಕ್ ಮಾಡಿ ಮತ್ತು ‘ವಿಳಾಸ’ ಆಯ್ಕೆ ಮಾಡಿ.
* ‘ಆಧಾರ್ ನವೀಕರಿಸಲು ಮುಂದುವರಿಯಿರಿ’ ಕ್ಲಿಕ್ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಯ ಪ್ರತಿಯನ್ನ ಅಪ್ಲೋಡ್ ಮಾಡಿ.