ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಿಂದ ರಾಜ್ಯಾಧ್ಯಂತ ಸಿಎಲ್-7 ಮದ್ಯದಂಗಡಿ ತೆರೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಮದ್ಯದಂಗಡಿ ತೆರೆಯೋದಕ್ಕೆ ಇಚ್ಚಿಸಿದ್ದರೇ ಈ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಅಬಕಾರಿ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ಹೊಸದಾಗಿ ಸಿಎಲ್-7 ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪಾಲಿಸಬೇಕಾದ ನಿಯಮಗಳು ಹಾಗೂ ಸಲ್ಲಿಸಬೇಕಾದ ದಾಖಲಾತಿಗಳ ವಿವರವನ್ನು ನೀಡಿದೆ.
ಹೀಗಿದೆ ಹೊಸದಾಗಿ ಸಿಎಲ್ -7 ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪಾಲಿಸಬೇಕಾದ ನಿಯಮಗಳು ಹಾಗು ಸಲ್ಲಿಸಬೇಕಾದ ದಾಖಲೆಗಳ ವಿವರ
- ಉದ್ದೇಶಿತ ಸನ್ನದು.ಕಟ್ಟಡವು ಸಂಬಂಧಪಟ್ಟ ಪ್ರಾಧಿಕಾರದಿಂದ ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿ ಪಡೆದಿರುವ ಪತ್ರ
- ಉದ್ದೇಶಿತ ಸನ್ನದು ಕಟ್ಟಡದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದು ಕಡ್ಡಾಯ.
- ಉದ್ದೇಶಿತ ಸನ್ನದು ಕಟ್ಟಡದಲ್ಲಿ ಅಗ್ನಿ ಶಾಮಕ ಸೌಲಭ್ಯವನ್ನು ಒದಗಿಸಿರುವ ಒಗೆ ಬೈಕ್ ಸೇಫ್ಟಿ ಪ್ರಮಾಣ ಪತ್ರ ಸಲ್ಲಿಸುವುದು.
- ಸರ್ಕಾರದ ಆದೇಶ ಸಂಖ್ಯೆ: ಒಡಬಲ್ಲ ಆಗ ಎಲೇಗಳೂರು, ಓ 10-1998 ರಸ್ತೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆರಿ ಹಾಗೂ ರಾಜ್ಯ ಹೆದ್ದಾರಿಯ ರಸ್ತೆಯ ಮಧ್ಯ ಭಾಗದಿಂದ 40 ಮಿಟರ ಒಳಗೆ ಎರಡು ಕಡೆಗೆ ಯಾವ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೊಡಬಂದು ಹಗಲು ಕರಿಗಳು, ಕಸಾರ ಗೃಹಗಳು, ಹೋಟೆಲ್ ಗಳು ಮುಲತಾದವುಗಳನ್ನು ನಡೆಸುವುದಕ್ಕೆ ಅನುಮತಿ ಬರಬಾರದು ಇರುತ್ತದೆ, ಆದ್ದರಿಂದ ರಾಷ್ಟ್ರೀಯ,ರಾಜ್ಯ ಹೆದ್ದಾರಿಯ ಯಾವುದೇ ಕಾಯ್ದೆ ನಿಯಮಗಳು ಉಲ್ಲಂಘನೆಯಾಗದಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಸಲ್ಲಿಸುವುದು.
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರಸ್ತಾವನೆಗಳಿಗೆ ಕಡ್ಡಾಯವಾಗಿ ತಹಶೀಲ್ದಾರರಿಂದ ಇಲಾಖೆ ಬಿಸ ಜನಸೂ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು.
- ಪ್ರಸ್ತಾಪಿತ ಕಟ್ಟಡಕ್ಕೆ ಸಂಬಂಧಪಟ್ಟಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಕಾಯ್ದೆ, ನಿಯಮಗಳು ಉಲ್ಲಂಘನೆಯಾಗದಿರುವ ಬಗ್ಗೆ ಹಾಗೂ ಪ್ರಾಧಿಕಾರದ ಯಾವುದೇ ಆಕ್ಷೇಪಣೆಗಳು ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು
- ಉದ್ದೇಶಿತ ಸನ್ನದು ಕಟ್ಟಡವು ಲೀಸ್, ಬಾಡಿಗೆ, ಕಟ್ಟಡವಾಗಿದ್ದಲ್ಲಿ, ಕಡ್ಡಾಯವಾಗಿ ನೋಂದಣಾಧಿಕಾರಿಗಳಿಂದ ನೋಂದಣಿ ಆಗಿರುವ ಬಗ್ಗೆ ನೋಂದಣಿ ಪತ್ರ ಸಲ್ಲಿಸುವುದು.
- ಪ್ರಸ್ತಾಪಿತ ಸನ್ನದಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಎಲ್ಲಾ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ ಯಾವುದೇ ನಿಯಮ ಉಲ್ಲಂಘನೆಯಾಗದಿರುವ ಬಗ್ಗೆ ಹಾಗೂ ದೂರುಗಳನ್ನು ವಿಲೇಗೊಳಿಸಿದ ದೂರುದಾರರಿಗೆ ಹಿಂಬರಹ ನೀಡುವುದು.
- ಉದ್ದೇಶಿತ ಸ್ಥಳಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ನ್ಯಾಯಾಲಯಗಳಿಂದ ತಡೆಯಾಜ್ಞೆ, ಆದೇಶಗಳಿದ್ದರೇ ಆದೇಶ ಪ್ರತಿಯನ್ನು ಲಗತ್ತಿಸುವುದು.
- ಉದ್ದೇಶಿತ ಕಟ್ಟಡದ ಎಲ್ಲಾ ಭಾಗಗಳು ಸ್ಪಷ್ಟವಾಗಿ ಕಾಣಿಸುವಂತೆ ಛಾಯಾಚಿತ್ರಗಳ್ನು ಸಲ್ಲಿಸುವುದು.
- ಅರ್ಜಿದಾರರು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದಲ್ಲೀ Memordum and Article Of Association and Board Resolution ಧೃಢೀಕರಣ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದು.
- ಅಬಕಾರಿ ಉಪ ಆಯುಕ್ತರು ಕಡ್ಡಾಯವಾಗಿ ಸ್ಥಳ ತನಿಖೆ ಮಾಡಿ ದಿನಾಂಕವನ್ನು ನಮೂದಿಸುವುದು. ಕರ್ನಾಟಕ ಅಬಕಾರಿ ( ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 5ರನ್ವಯ ಆಕ್ಷೇಪಣಾ ರಹಿತ ಸ್ಥಳವಾಗಿರುವ ಬಗ್ಗೆ ಹಾಗೂ ಜನಸಂಖ್ಯೆ ಕುರಿತು ಸ್ಪಷ್ಟವಾಗಿ ನಮೂದಿಸುವುದು.
- ಉದ್ದೇಶಿತ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಾದ ಕಟ್ಟಡದ ಮುಂಭಾಗ, ಸ್ವಾಗತ ಕೊಠಡಿ, ಬಾರ್ ಕೌಂಟರ್, ರೆಸ್ಟೋರೆಂಟ್, ಅಡುಗೆ ಮನೆ, ಡಬಲ್ ಬೆಡ್ ರೂಮ್ ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವುದು.
- ಅರ್ಜಿದಾರರ ಭಾವಚಿತ್ರ, ಮಾದರಿ ಸಹಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸಲ್ಲಿಸುವುದು
- ಇತರೆ ದಾಖಲೆಗಳ ಕಾಯ್ದೆ, ನಿಯಮ ಪಾಲನೆ ಮಾಡುವುದು ಕಡ್ಡಾಯ. ಅಂದರೆ ತೆರಿಗೆ ಪಾವತಿ, ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಗಳಿಗೆ ನೀಡಬೇಕಾದ ತೆರಿಗೆ ರಸೀದಿಗಳನ್ನು ಸಲ್ಲಿಸುವುದು.
- ಉದ್ದೇಶಿತ ಸನ್ನದು ಕಡ್ಡದ ನೀಲನಕ್ಷೆಯ ಪ್ರತಿಗಳನ್ನು ಸಲ್ಲಿಸುವುದು.
- ಉದ್ದೇಶಿತ ಕಟ್ಟಡಕ್ಕೆ ಸಿಎಲ್-7 ಸನ್ನದು ಮಂಜೂರಾತಿಗಾಗಿ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸಿದ ಸನ್ನದು ಶುಲ್ಕ ಹಾಗೂ ಹೆಚ್ಚುವರಿ ಸನ್ನದು ಶುಲ್ಕ ಪಾವತಿ ಮಾಡಿರುವ ಚಲನ್ ಪ್ರತಿಗಳನ್ನು ಸಲ್ಲಿಸುವುದು.
- ಉದ್ದೇಶಿತ ಕಟ್ಟಡದಲ್ಲಿ ಸಿಎಲ್-7 ಮಂಜೂರಾತಿಗಾಗಿ ಕಡ್ಡಾಯವಾಗಿ ಇ-ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದ ನಂತ್ರ ಭೌತಿಕ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವುದು.
ಸಂಧಾವಿತ ಅರ್ಜಿದಾರರು ಈ ಮೇಲಿನ ಸಂಬಂಧಿಸಿದ ಅಂಶಗಳನ್ವಯ ಉದ್ದೇಶಿತ ಸಿಎಂ-1 ನನ್ನದು ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪಡೆಯುವುದು, ಸದರಿ ಸಲ್ಲಿಸಿದ ಉದ್ದೇಶಿತ ಎರ-7 ಸನ್ನದು ಮಂಜೂರಾತಿಯ ಅರ್ಜಿಯನ್ನು ಇಲಾಖೆಯ ನಿಯಮಾನುಸಾರ ಪರಿಶೀಲಿಸಿ ಸಮೂಚಿತ ಮಾರ್ಗದನ್ವಯ ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು.
ಒಂದು ವೇಳೆ ಈ ಮೇಲಿನ ಯಾವುದೇ ಅಂಶಗಳನ್ನು ಪಾಲಿಸಲು ವಿಫಲರಾದ ಅರ್ಜಿದಾರರ ಅರ್ಜಿಗಳನ್ನು ಇಲಾಖಾ ನಿಯಮಗಳನ್ವಯ ಸಕ್ಕ ಕಾರಣಗಳೊಂದಿಗೆ ಹಿಂದಿರುಗಿಸಲಾಗುವುದು, ಉದ್ದೇಶಿತ ಸಿಎಲ್- ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಯಾವದೇ ದಿನಾಂಕದ ನಿರ್ಭಂಧ ಇರುವುದಿಲ್ಲ ಮತ್ತು ಸದರಿ ಉದ್ದೇಶಿತ ಸಿಎಲ್-7 ನಕ್ಕರು ಮಂಜೂರಾತಿಯು “ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಪರತ್ತುಗಳು) ನಿಯಮಗಳು 1967 ರ ನಿಯಮ 5 ರ ನಿಬಂಧನೆಗೆ ಒಳಪಟ್ಟಿರುತ್ತವೆ. ಅಲ್ಲದೇ ಸರ್ಕಾರದ ಇಲಾಖೆಯ ಕಾಲ ಕಾಲಕ್ಕೆ ಹೊರಡಿಸುವ ನಿಯಮ ನಿಬಂಧನೆಗಳಿಗೆ ಸನ್ನದು ಮಂಜೂರಾತಿ ಪ್ರಕ್ರಿಯೆಯು ಒಳಪಟ್ಟಿರುತ್ತದೆ.
ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಮಾಹಿತಿಗಾಗಿ ನಿಮ್ಮ ಹತ್ತಿರದ ಅಬಕಾರಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಈಗಾಗಲೇ 12,614 ಮದ್ಯದಂಗಡಿಗಳಿವೆ
ರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್‌ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್‌ಐಎಲ್ (ಸಿಎಲ್11ಸಿ), 745 ಆರ್‌ವಿಬಿ ಸೇರಿ ಒಟ್ಟಾರೆ 12,614 ಮದ್ಯದಂಗಡಿಗಳಿವೆ. ಸಿಎಲ್2 ಹಾಗೂ ಸಿಎಲ್9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಲೈಸೆನ್ಸ್ ನೀಡುತ್ತಿದೆ.