ಬೆಂಗಳೂರು: ನಗರದ ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ನಾಳೆಯಿಂದ ಜನವರಿ.30ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ನ ತಾತ್ಕಾಲಿಕ ಅಲಭ್ಯವಾಗಲಿದೆ.
ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025 ರ ಜನವರಿ 15 ರಿಂದ 30 ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಯಪಡಿಸುತ್ತಿರುವುದಾಗಿ ಹೇಳಿದೆ.
ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ (Karnataka State Data Centre -KSDC) ಮೈಗ್ರೆಂಟ್ ಕೆಲಸ ನಡೆಯುತ್ತಿದೆ. ಈ ಕಾರಣದಿಂದ ಸಮಸ್ಯೆ ಎದುರಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ ( Bangalore Metropolitan Transport Corporation -BMTC) ಈ ಅವಧಿಯಲ್ಲಿ ಉಂಟಾದ ಯಾವುದೇ ಅನಾನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಪ್ರಯಾಣಿಕರ ತಿಳಿಯ ಪಡಿಸಲು ಬಯಸುತ್ತಿದ್ದೇವೆ ಎಂಬುದಾಗಿ ತಿಳಿಸಿದೆ.
ನಮ್ಮ ಬಿಎಂಟಿಸಿ ಅಪ್ಲಿಕೇಷನ್ ತಾತ್ಕಾಲಿಕವಾಗಿ ಸ್ಥಗಿತದಿಂದ ಏನೆಲ್ಲ ಅಲಭ್ಯತೆ.?
1. ಲೈವ್ ಬಸ್ ಟ್ರ್ಯಾಕಿಂಗ್ ಲಭ್ಯವಿರಲ್ಲ
2. ಜರ್ನಿ ಪ್ಲ್ಯಾನರ್ ಸಿಗಲ್ಲ
3. ಶುಲ್ಕ ಕ್ಯಾಲ್ಕುಲೇಟರ್ ಮಾಡೋಕೆ ಆಗಲ್ಲ.
4. ವೇಳಾಪಟ್ಟಿ ಮಾಹಿತಿ ಸಿಗೋದಿಲ್ಲ.
5. ಮಾರ್ಗ ಟ್ರ್ಯಾಕಿಂಗ್ ಪ್ರಯಾಣಿಕರಿಗೆ ಅಲಭ್ಯ
ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಬಿಎಂಟಿಸಿ ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಹೆಚ್ಚಿಸಲು ಬದ್ಧವಾಗಿದೆ. ಈ ಸಮಸ್ಯೆಯು ಕೆಲ ತಾಂತ್ರಿಕ ಸಮಸ್ಯೆ ಸರಿಪಡಿಸುವುದಕ್ಕಾಗಿ ಆಗಿದೆ. ಸಾರ್ವಜನಿಕರು, ಪ್ರಯಾಣಿಕರು ಸಹಕರಿಸುವಂತೆ ಬಿಎಂಟಿಸಿ ಮನವಿ ಮಾಡಿದೆ.
ವರದಿ: ವಸಂತ ಬಿ ಈಶ್ವರಗೆರೆ
ಬೆಂಗಳೂರಲ್ಲಿ ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana