ಬೆಂಗಳೂರು: ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ಬಳಿಯ ಆದಾಯ ತೆರಿಗೆ ಇಲಾಖೆ ಕಚೇರಿಯ ಪ್ರವೇಶ ದ್ವಾರವನ್ನು ಪ್ರಯಾಣಿಕರ ಸೇವೆಗೆ ತೆರೆದಿರಲಿಲ್ಲ. ಇದೀಗ ಪ್ರಯಾಣಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 13-01-2025ರಿಂದ ಕಬ್ಬನ್ ಪಾರ್ಕ್ ನ ಮೆಟ್ರೋ ಎಸ್ಟಿಎನ್ ಜಿ ಪ್ರವೇಶದ್ವಾರ ಅಂದರೆ ಆದಾಯ ತೆರಿಗೆ ಕಚೇರಿಯ ಬಳಿಯ ಪ್ರವೇಶದ್ವಾರವನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆ ಬಳಿಕವೂ ಕೆಲ ನಿರ್ವಹಣಾ ಕಾಮಗಾರಿ ಮುಂದುವರೆದಿತ್ತು ಎಂದಿದೆ.
ಇಂದಿನಿಂದ ಕಬ್ಬನ್ ಪಾರ್ಕ್ ಮೆಟ್ರೋ ಎಸ್ಟಿಎನ್ ಜಿ ಪ್ರವೇಶದ್ವಾರ (ಆದಾಯ ತೆರಿಗೆ) ಭಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆರೆಯಲಾಗಿದೆ. ಮೆಟ್ರೋ ಪ್ರಯಾಣಿಕರು ಈ ಪ್ರವೇಶ ಮಾರ್ಗದ ಅನುಕೂಲವನ್ನು ಪಡೆಯುವಂತೆ ಮನವಿ ಮಾಡಿದೆ.
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan
BREAKING : ಬೆಂಗಳೂರಲ್ಲಿ ವಕೀಲೆಯ ಮೇಲೆ ‘ಲೈಂಗಿಕ ದೌರ್ಜನ್ಯ’ ನಡೆಸಿ ಹಲ್ಲೆ : IT ಅಧಿಕಾರಿಯ ವಿರುದ್ಧ ‘FIR’ ದಾಖಲು!