ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಲ್ಲೇ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ಮತ್ತೊಂದು ಜಾಹೀರಾತು ಪ್ರಕಟಿಸಿದೆ. ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂ.ತೆರಿಗೆಯಲ್ಲಿ ಮರಳಿ ಸಿಗುವುದು ಕೇವಲ 13 ರೂ. ಮಾತ್ರ ಎಂದು ಆರೋಪಿಸಿದೆ.
ಇಂದಿನ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿರುವ ರಾಜ್ಯ ಕಾಂಗ್ರೆಸ್, ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ ₹100 ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ ₹13 ಮಾತ್ರ. ಈ ಅನ್ಯಾಯ ಎಲ್ಲಿಯವರೆಗೆ ? ಮೋದಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡೋಣ. ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದೆ.
ಡಬಲ್ ಇಂಜಿನ್ ಸರ್ಕಾರವಿದ್ದಾಗಲೂ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಒಂದೇ ಒಂದು ಹೆಜ್ಜೆಯ ಪ್ರಗತಿಯಾಗಲಿಲ್ಲ, ಮೂಗಿಗೆ ತುಪ್ಪ ಸವರುವಂತೆ ಬಜೆಟ್ ನಲ್ಲಿ 5,300 ಕೋಟಿ ರೂಪಾಯಿಗಳನ್ನು ಘೋಷಿಸಿ ನಂತರ ಬಿಡುಗಡೆ ಮಾಡದೆ ಕನ್ನಡಿಗರಿಗೆ ಚೊಂಬು ನೀಡಿದೆ BJPChombuSarkara. ಬಿಜೆಪಿ ಕೊಟ್ಟ ಚೊಂಬನ್ನು ಕನ್ನಡಿಗರು ಮರಳಿ ಬಿಜೆಪಿಗೆ ನೀಡಬೇಕಿದೆ. ಕನ್ನಡಿಗರಿಗೆ ಬಿಜೆಪಿಯ ಚೊಂಬಿನ ಋಣ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದೆ.