ಉತ್ತರ ಪ್ರದೇಶ : ಕಬ್ಬಡಿ ಕ್ರೀಡಾಪಟುಗಳಿಗೆ ಇಲ್ಲಿನ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಹಾರನ್ ಪುರದಲ್ಲಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡ್ತಿದೆ.

Video : ತೈವಾನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ 600 ಮೀಟರ್ ಉದ್ದದ ಮೆಗಾ ಸೇತುವೆ ಧ್ವಂಸ| Taiwan earthquake

ಸೆಪ್ಟೆಂಬರ್ 16 ರಂದು ಸಹರಾನ್ ಪುರದಲ್ಲಿ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿ ನಡೆದಿದ್ದು, ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಆಹಾರ ತಯಾರಿಸಿ ಟಾಯ್ಲೆಟ್ ನಲ್ಲಿ ಇಡಲಾಗಿದೆ ಅದನ್ನೇ ಕ್ರೀಡಾಪಟುಗಳು ಬಡಿಸಿಕೊಂಡು ಊಟಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ  ನೆಟ್ಟಿಗರಿಂದ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಕ್ರೀಡಾ ಅಧಿಕಾರಿಗಳು ಕ್ರೀಡಾಪಟುಗಳಿಗೆ ಉತ್ತಮವಾದ ಆಹಾರವನ್ನೇ ನೀಡಲಾಗಿದೆ ಅಲ್ಲದೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಕಾರಣ ಕಟ್ಟಡದ ಕೆಳ ಅಂತಸ್ಥಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ .

Video : ತೈವಾನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ 600 ಮೀಟರ್ ಉದ್ದದ ಮೆಗಾ ಸೇತುವೆ ಧ್ವಂಸ| Taiwan earthquake

ಆದರೆ ವಿಡಿಯೋ ದಲ್ಲಿ ಕಾಣುವಂತೆ ಅಲ್ಲಿನ ಕ್ರೀಡಾಪಟುಗಳು ಹೇಳಿಕೆ ನೀಡಿದ್ದು ಊಟಕ್ಕೆ ಸರಿಯಾದ ಜಾಗದ ವ್ಯವಸ್ಥೆಯೂ ಇರಲಿಲ್ಲ, ಆಹಾರಗಳನ್ನು ಶೌಚಾಲಯಲ್ಲೇ ಇಟ್ಟಿದ್ದರು ನಾವು ಅಲ್ಲೇ ಊಟ ಮಾಡಬೇಕಿತ್ತು, ಅಲ್ಲದೆ ಊಟದ ಗುಣಮಟ್ಟವು ಕೆಟ್ಟದಾಗಿತ್ತು ಎಂದು ದೋರಿದ್ದಾರೆ.

Share.
Exit mobile version