ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಗ್ನೇಯ ತೈವಾನ್‌ನಲ್ಲಿ ಭಾನುವಾರ 6.9 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ 600 ಮೀಟರ್ ಉದ್ದದ ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ.

BREAKING NEWS: ಮ್ಯಾನ್ಮಾರ್‌ನ ಶಾಲೆ ಮೇಲೆ ಸೇನಾ ಹೆಲಿಕಾಪ್ಟರ್‌ ದಾಳಿ: 7 ಮಕ್ಕಳು ಸೇರಿದಂತೆ 13 ಮಂದಿ ಸಾವು

ಡ್ರೋನ್ ದೃಶ್ಯಾವಳಿಗಳು ಪೂರ್ವ ಹುವಾಲಿಯನ್ ಕೌಂಟಿಯಲ್ಲಿನ ಗಾವೊಲಿಯಾವೊ ಸೇತುವೆಯು ತುಂಡುಗಳಾಗಿ ಬಿದ್ದಿರುವುದನ್ನು ತೋರಿಸಿದೆ. ಭೂಕಂಪನದಿಂದಾಗಿ ಸೇತುವೆಯ ಭಾಗಗಳು ಪುಡಿಉಡಿಯಾಗಿವೆ ಎನ್ನಲಾಗುತ್ತಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.9 ರಷ್ಟು ದಾಖಲಾಗಿದ್ದು, ಭೂಕಂಪವು ತೈವಾನ್‌ನ ಆಗ್ನೇಯ ಭಾಗದಲ್ಲಿರುವ ಚಿಶಾಂಗ್ ಟೌನ್‌ಶಿಪ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವಪ್ಪಿದ್ದು, ಸುಮಾರು 146 ಜನರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಭೂಕಂಪನದಿಂದಾಗಿ ಗ್ರಾಮೀಣ ಬೆಲ್ಟ್‌ನಲ್ಲಿ ಕಟ್ಟಡಗಳು ಉರುಳಿದ್ದು, ರೈಲು ಬೋಗಿಗಳು ಹಳಿತಪ್ಪಿವೆ. ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಮತ್ತೆ ಹಿಂಪಡೆಯಲಾಗಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ‘ಡೈಡ್ಯಾಕ್ಟ್ ಇಂಡಿಯಾ ಸಮಾವೇಶ’

Share.
Exit mobile version