Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ‘ಸೋಷಿಯಲ್ ಮೀಡಿಯಾ’ಗಳ ಹಾನಿಕಾರಕ ‘ಪೋಸ್ಟ್‌’ಗಳನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು: ಕೇಂದ್ರ ಸರ್ಕಾರ ಆದೇಶ

10/02/2026 5:30 PM

ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ ಯಶಸ್ವಿಯಾಗಿ ಮುಕ್ತಾಯ: ಪ್ರವೀಣ್ ಕುಮಾರ್.ಹೆಚ್‍.ಡಿ

10/02/2026 5:23 PM
BREAKING NEWS

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಹಾನಿಕಾರಕ ವಿಷಯವನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು: ಕೇಂದ್ರ ಸರ್ಕಾರ ಸೂಚನೆ

10/02/2026 5:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ ಯಶಸ್ವಿಯಾಗಿ ಮುಕ್ತಾಯ: ಪ್ರವೀಣ್ ಕುಮಾರ್.ಹೆಚ್‍.ಡಿ
KARNATAKA

ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ ಯಶಸ್ವಿಯಾಗಿ ಮುಕ್ತಾಯ: ಪ್ರವೀಣ್ ಕುಮಾರ್.ಹೆಚ್‍.ಡಿ

By kannadanewsnow0910/02/2026 5:23 PM

ಚಿತ್ರದುರ್ಗ: ಹೊನ್ನೇಕೆರೆ ಗೊಲ್ಲರಹಟ್ಟಿ (ಅಮರಾವತಿ ಗೊಲ್ಲರಹಟ್ಟಿ) ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ, ಶ್ರೀ ಮಲೆಯಾಂಬಿಕೆ ದೇವಿ ಹಾಗೂ ಬ್ಯಾಡರಹಳ್ಳಿ ತಿಮ್ಮಪ್ಪ ಮತ್ತು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪನ ದಿವ್ಯ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂಬುದಾಗಿ ಕಾಡುಗೊಲ್ಲರ ಜನಪದ ಸೊಗಡು ವೇದಿಕೆಯ ಸಂಸ್ಥಾಪಕ ಪ್ರವೀಣ್ ಕುಮಾರ್.ಹೆಚ್.ಡಿ ತಿಳಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,  ಸುಮಾರು 15 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ನೆಂಟರಿಷ್ಟರೆಲ್ಲರೂ ಸೇರಿ ಕೈಗೊಂಡಿದ್ದ ಈ ಯಾತ್ರೆಯು ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತ್ತು. ಯಾತ್ರೆ ಮುಗಿಸಿ ಮರಳಿದ ಭಕ್ತಾದಿಗಳನ್ನು ಸಂಪ್ರದಾಯದಂತೆ ಊರಿನ ಹೊರವಲಯದಲ್ಲಿರುವ ಅರಳಿಹಳ್ಳಿ ಕೆರೆ ಅಂಗಳದಲ್ಲಿ ಸ್ವಾಗತಿಸಲಾಯಿತು. ಅಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ತಿಮ್ಮಪ್ಪ ಸ್ವಾಮಿಯ ‘ಬಿಲ್ಲು ಗೂಡು’ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಅನ್ನದಾಸೋಗ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ.

ಅನ್ನಪ್ರಸಾದ ಸ್ವೀಕರಿಸಿದ ನಂತರ, ಭಕ್ತಾದಿಗಳು ಅರಳಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವ ಶ್ರೀ ಮಲೆಯಾಂಬಿಕೆ ದೇವಿಯ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕುಲದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ ಹಾಗೂ ಬ್ಯಾಡರಹಳ್ಳಿ ತಿಮ್ಮಪ್ಪನ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ಮೆರವಣಿಗೆಯ ಮೂಲಕ ಹೊನ್ನೇಕೆರೆ ಗೊಲ್ಲರಹಟ್ಟಿ ಗ್ರಾಮವನ್ನು ಪ್ರವೇಶಿಸಿದರು ಎಂದು ತಿಳಿಸಿದ್ದಾರೆ.

ದಶಕಗಳ ನಂತರ ಗ್ರಾಮದ ಬಂಧು-ಬಳಗದವರೆಲ್ಲರೂ ಒಂದಾಗಿ ಕೈಗೊಂಡ ಈ ಭಕ್ತಿ ಕಾರ್ಯವು ಊರಿನ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಆ ಮೂಡಲಗಿರಿ ತಿಮ್ಮಪ್ಪ ಹಾಗೂ ನಮ್ಮೂರಿನ ದೈವಗಳು ಗ್ರಾಮಸ್ಥರೆಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾರೈಸಿದ್ದಾಗಿ ತಿಳಿಸಿದ್ದಾರೆ.

ವರದಿ: ಶಶಿ ಬಿ ಈಶ್ವರಗೆರೆ, ಚಿತ್ರದುರ್ಗ

ಬೆಂಗಳೂರು ಏರ್‌ಪೋರ್ಟ್‍ನಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ FIR ದಾಖಲು

ಸಾಗರದಲ್ಲಿ ಅರಣ್ಯ ಜಮೀನು ತೆರವು ನೋಟೀಸ್: ತಮ್ಮದೇ ಸರ್ಕಾರದ ವಿರುದ್ದ ಕೆಡಿಪಿ ಸದಸ್ಯ ಅಸಮಾಧಾನ

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಅರಣ್ಯ ಜಮೀನು ತೆರವು ನೋಟೀಸ್: ತಮ್ಮದೇ ಸರ್ಕಾರದ ವಿರುದ್ದ ಕೆಡಿಪಿ ಸದಸ್ಯ ಅಸಮಾಧಾನ

10/02/2026 5:11 PM3 Mins Read

ವೀರ ಕಂಬಳಕ್ಕಾಗಿ ಬಣ್ಣ ಹಚ್ಚಿದ ವೀರೇಂದ್ರ ಹೆಗ್ಗಡೆ!

10/02/2026 5:02 PM2 Mins Read

BIG NEWS : ದಕ್ಷಿಣಕನ್ನಡದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ : ‘FIR’ ದಾಖಲು

10/02/2026 4:47 PM1 Min Read
Recent News

BREAKING: ‘ಸೋಷಿಯಲ್ ಮೀಡಿಯಾ’ಗಳ ಹಾನಿಕಾರಕ ‘ಪೋಸ್ಟ್‌’ಗಳನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು: ಕೇಂದ್ರ ಸರ್ಕಾರ ಆದೇಶ

10/02/2026 5:30 PM

ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ ಯಶಸ್ವಿಯಾಗಿ ಮುಕ್ತಾಯ: ಪ್ರವೀಣ್ ಕುಮಾರ್.ಹೆಚ್‍.ಡಿ

10/02/2026 5:23 PM
BREAKING NEWS

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಹಾನಿಕಾರಕ ವಿಷಯವನ್ನು 3 ಗಂಟೆಗಳಲ್ಲಿ ತೆಗೆದುಹಾಕಬೇಕು: ಕೇಂದ್ರ ಸರ್ಕಾರ ಸೂಚನೆ

10/02/2026 5:21 PM

VIDEO : ಶ್ರೀಲಂಕಾದಲ್ಲಿ ಪಾಕ್ ತಂಡಕ್ಕೆ ವಿಚಿತ್ರ ಆತಿಥ್ಯ, ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯ, ವಿಡಿಯೋ ವೈರಲ್!

10/02/2026 5:14 PM
State News
KARNATAKA

ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ ಯಶಸ್ವಿಯಾಗಿ ಮುಕ್ತಾಯ: ಪ್ರವೀಣ್ ಕುಮಾರ್.ಹೆಚ್‍.ಡಿ

By kannadanewsnow0910/02/2026 5:23 PM KARNATAKA 1 Min Read

ಚಿತ್ರದುರ್ಗ: ಹೊನ್ನೇಕೆರೆ ಗೊಲ್ಲರಹಟ್ಟಿ (ಅಮರಾವತಿ ಗೊಲ್ಲರಹಟ್ಟಿ) ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ, ಶ್ರೀ ಮಲೆಯಾಂಬಿಕೆ ದೇವಿ ಹಾಗೂ…

ಸಾಗರದಲ್ಲಿ ಅರಣ್ಯ ಜಮೀನು ತೆರವು ನೋಟೀಸ್: ತಮ್ಮದೇ ಸರ್ಕಾರದ ವಿರುದ್ದ ಕೆಡಿಪಿ ಸದಸ್ಯ ಅಸಮಾಧಾನ

10/02/2026 5:11 PM

ವೀರ ಕಂಬಳಕ್ಕಾಗಿ ಬಣ್ಣ ಹಚ್ಚಿದ ವೀರೇಂದ್ರ ಹೆಗ್ಗಡೆ!

10/02/2026 5:02 PM

BIG NEWS : ದಕ್ಷಿಣಕನ್ನಡದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ : ‘FIR’ ದಾಖಲು

10/02/2026 4:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.