ನವದೆಹಲಿ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಈ ತಿಂಗಳ ಅಂತ್ಯದ ವೇಳೆಗೆ ಮೊದಲ ಎಲ್ಸಿಎ ಮಾರ್ಕ್ -1 ಎ ಯುದ್ಧ ವಿಮಾನವನ್ನು ವಾಯುಪಡೆಗೆ ತಲುಪಿಸುವ ನಿರೀಕ್ಷೆಯಿದೆ.
ಸರ್ಕಾರಿ ಸ್ವಾಮ್ಯದ ಎಚ್ಎಎಲ್ ಮೊದಲ ಅವಳಿ ಆಸನಗಳ ತರಬೇತಿ ವಿಮಾನವನ್ನು ಆದಷ್ಟು ಬೇಗ ಐಎಎಫ್ಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
83 ಎಲ್ಸಿಎ ವಿಮಾನಗಳನ್ನು ಪೂರೈಸಲು ಐಎಎಫ್ ಎಚ್ಎಎಲ್ ನೊಂದಿಗೆ 48,000 ಕೋಟಿ ರೂ.ಗಳ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇನ್ನೂ 97 ವಿಮಾನಗಳಿಗೆ 65,000 ಕೋಟಿ ರೂ.ಗೆ ಅನುಮೋದನೆ ಪಡೆದಿದೆ.
ಎಲ್ಸಿಎ ಮಾರ್ಕ್ 1 ವಿಮಾನವನ್ನು 2016 ರಲ್ಲಿ ವಾಯುಪಡೆಗೆ ಸೇರಿಸಲಾಯಿತು. ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು 97 ಎಲ್ಸಿಎಗೆ ಅನುಮೋದನೆ ನೀಡಿರುವುದು ಐತಿಹಾಸಿಕ ಎಂದು ಬಣ್ಣಿಸಿದ್ದರು.