ನವದೆಹಲಿ : ಮಾರ್ಚ್ 11ರಂದು ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ಬಂದ ನಂತರ ಮೊದಲ ಬಾರಿಗೆ, ಮೊರ್ಬಿಯಲ್ಲಿರುವ 13 ಪಾಕಿಸ್ತಾನಿ ಹಿಂದೂ ನಿರಾಶ್ರಿತರಿಗೆ ಗುರುವಾರ ಭಾರತೀಯ ಪೌರತ್ವ ನೀಡಲಾಯಿತು. ಶಾಸಕ ಕಾಂತಿ ಅಮೃತಿಯಾ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾರಂಭ ನಡೆಯಿತು.
ಮೊರ್ಬಿ 1095 ಪಾಕಿಸ್ತಾನಿ ನಿರಾಶ್ರಿತರಿಗೆ ದೀರ್ಘಕಾಲದವರೆಗೆ ನೆಲೆಯಾಗಿದೆ. ಅವರಲ್ಲಿ 95 ಮಂದಿ ಈಗಾಗಲೇ ಭಾರತೀಯ ಪೌರತ್ವವನ್ನ ಪಡೆದುಕೊಂಡಿದ್ದಾರೆ ಮತ್ತು ಉಳಿದ ನಿರಾಶ್ರಿತರು ನಿಗದಿತ ನಿಯಮಗಳನ್ನ ಅನುಸರಿಸಿ ಸರಿಯಾದ ಸಮಯದಲ್ಲಿ ಪೌರತ್ವವನ್ನ ಪಡೆಯಲಿದ್ದಾರೆ.
ಮೇ 28, 2021ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಅಡಿಯಲ್ಲಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಪೌರತ್ವ ನೀಡಲು ಮೊರ್ಬಿ, ರಾಜ್ಕೋಟ್, ಪಟಾನ್ ಮತ್ತು ವಡೋದರಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಮೊರ್ಬಿ ಜಿಲ್ಲಾಧಿಕಾರಿ ಕೆ.ಬಿ.ಜವೇರಿ ಮತ್ತು ಶಾಸಕ ಕಾಂತಿ ಅಮೃತಿಯಾ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ ನಂತ್ರ ಮೊರ್ಬಿಯಲ್ಲಿ ವಾಸಿಸುತ್ತಿದ್ದ 13 ಹಿಂದೂಗಳು ತಮ್ಮ ಭಾರತೀಯ ಪೌರತ್ವ ಪ್ರಮಾಣಪತ್ರಗಳನ್ನ ಸ್ವೀಕರಿಸಿದರು.
45 ಲಕ್ಷ ಸಂಬಳ ಕೇಳಿದ 4 ವರ್ಷದ ಅನುಭವ ಹೊಂದಿರೋ ಮಹಿಳೆ, “ಸಾಲಕ್ಕೆ ಅರ್ಜಿ ಸಲ್ಲಿಸ್ಬೇಕು” ಎಂದ ಸ್ಟಾರ್ಟ್ಅಪ್ ‘CEO’
ನಾನು ಮಾಜಿಯಾದರು ಏನಾದ್ರೂ ನಿಮ್ಮ ಕೆಲಸ ಆಗ್ಬೇಕಾ? ನನಗೆ ಕರೆ ಮಾಡಿ- ಪ್ರತಾಪ್ ಸಿಂಹ