ರಾಮನಗರ: ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿದಂತ ಪ್ರಕರಣ ವರದಿಯಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಡದಿ ಠಾಣೆಯ ಪೊಲೀಸರು ರಿಕ್ಕಿ ರೈಗೆ ನೋಟಿಸ್ ನೀಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ಮುತ್ತಪ್ಪ ರೈ ಅವರ ಎರಡನೇ ಪತ್ನಿಗೂ ಪೊಲೀಸರು ನೋಟಿಸ್ ನೀಡಿದ್ದರು. ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರು. ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಇದೀಗ ಫೈರಿಂಗ್ ಪ್ರಕರಣದಲ್ಲಿ ಮೇ.7ರ ಬುಧವಾರದಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿಡದಿ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಮೂಲಕ ರಿಕ್ಕಿ ರೈ ಹೇಳಿಕೆ ದಾಖಲಿಸೋದಕ್ಕೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ಅಂದಹಾಗೇ ಗುಂಡಿನ ದಾಳಿ ಪ್ರಕರಣದಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೈ ಹಾಗೂ ಮೂಗಿನ ಭಾಗಕ್ಕೆ ಗಂಭೀರವಾದಂತ ಗಾಯವಾಗಿತ್ತು. ಆ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಫೈರಿಂಗ್ ಪ್ರಕರಣಕ್ಕೆ ಆಸ್ತಿವಿವಾದವೇ ಕಾರಣ. ನನ್ನ ಚಿಕ್ಕಮ್ಮನೇ ಇದಕ್ಕೆಲ್ಲ ಹೊಣೆ ಎಂಬುದಾಗಿ ರಿಕ್ಕಿ ರೈ ಆರೋಪಿಸಿದ್ದರು.
ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ: ಹಣಕಾಸು ನಿರ್ವಹಣೆ, ಅಭಿವೃದ್ಧಿ, ಆಡಳಿತದಲ್ಲಿ ದೇಶದಲ್ಲೇ 3ನೇ ಸ್ಥಾನ