ಹೈದರಾಬಾದ್: ಹೈದರಾಬಾದ್ನಲ್ಲಿ ಭಾನುವಾರ ಸಂಜೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹುಸೇನ್ ಸಾಗರ್ ಸರೋವರದಲ್ಲಿ ದೋಣಿಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ನಗರದ ನೆಕ್ಲೆಸ್ ರಸ್ತೆಯಲ್ಲಿರುವ ಪೀಪಲ್ಸ್ ಪ್ಲಾಜಾ ಮೈದಾನದಲ್ಲಿ ಭಾರತ ಮಾತಾ ಫೌಂಡೇಶನ್ ಆಯೋಜಿಸಿದ್ದ ಭಾರತ ಮಾತಾ ಮಹಾ ಆರತಿ ಕಾರ್ಯಕ್ರಮದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ
ಸರೋವರದಲ್ಲಿ ಎರಡು ದೋಣಿಗಳಲ್ಲಿ ಸ್ಥಾಪಿಸಲಾದ ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಭಾಗವಹಿಸಿದ್ದರು, ಆದರೆ ಬೆಂಕಿ ಕಾಣಿಸಿಕೊಳ್ಳುವ ಹೊತ್ತಿಗೆ ಅವರು ಸ್ಥಳದಿಂದ ಹೊರಟಿದ್ದರು.
‘ಭಾರತ್ ಮಾತಾ ಮಹಾ ಆರತಿ’ ಕಾರ್ಯಕ್ರಮದ ಮುಕ್ತಾಯದ ಸಮಯದಲ್ಲಿ ಪಟಾಕಿಗಳಲ್ಲಿ ಬಳಸಲಾದ ರಾಕೆಟ್ಗಳಲ್ಲಿ ಒಂದು ದೋಣಿಯಲ್ಲಿ ಸಂಗ್ರಹಿಸಿದ ಪಟಾಕಿಗಳಿಗೆ ಡಿಕ್ಕಿ ಹೊಡೆದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ್ ಮಾತಾ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರಾದ ಕೊಂಡಾ ವಿಶ್ವೇಶ್ವರ ರೆಡ್ಡಿ, ಈಟಾಲಾ ರಾಜೇಂದರ್ ಮತ್ತು ಎಂ ರಘುನಂದನ್ ರಾವ್ ಮತ್ತು ‘ಆರ್ಆರ್ಆರ್’ ಖ್ಯಾತಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು