ನವದೆಹಲಿ: ದೆಹಲಿಯ ಶಹದಾರಾ ಪ್ರದೇಶದ ಮನೆಯೊಂದರಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕ ಇಲಾಖೆಯ ಪ್ರಕಾರ, ಬೆಳಿಗ್ಗೆ 5: 24 ಕ್ಕೆ ಘಟನೆಯನ್ನು ವರದಿ ಮಾಡಿ ಕರೆ ಬಂದಿದೆ. ಕಟ್ಟಡದ ಮೂರು ಮತ್ತು ನಾಲ್ಕನೇ ಮಹಡಿಗಳನ್ನು ಆವರಿಸಿದ ಬೆಂಕಿಯನ್ನು ನಿಯಂತ್ರಿಸಲು ಆರು ಅಗ್ನಿಶಾಮಕ ಯಂತ್ರಗಳನ್ನು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಅಗ್ನಿಶಾಮಕ ದಳದವರು ಮನೆಯಿಂದ ಇಬ್ಬರು ವ್ಯಕ್ತಿಗಳ ಸುಟ್ಟ ದೇಹಗಳನ್ನು ಹೊರತೆಗೆದಿದ್ದಾರೆ. ಇದಲ್ಲದೆ, ಇಬ್ಬರು ಮಕ್ಕಳನ್ನು ರಕ್ಷಿಸಿ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ನಿಮ್ಮ ಫೋನ್, ಲ್ಯಾಪ್ಟಾಪ್ ರಕ್ಷಣೆಗೆ ಬರ್ತಿದೆ ‘AI ತಂತ್ರಜ್ಞಾನ’; ಇದು ‘ಸೈಬರ್ ವಂಚನೆ’ ತಡೆಗೆ ಬ್ರಹ್ಮಾಸ್ತ್ರ..!
BREAKING : ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ ಪ್ರಕರಣ : ‘CCB’ ತನಿಖೆಗೆ ವಹಿಸಿ ಕಮಿಷನರ್ ಆದೇಶ