ಚಿತ್ರದುರ್ಗ: ಜಿಲ್ಲೆಯ ರೈತರೊಬ್ಬರಿಗೆ ಸೇರಿದಂತ ಕೊಬ್ಬರಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ಆವರಿಸಿದ್ದರಿಂದ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟು ಭಸ್ಮವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದಲ್ಲೇ ಇಂತಹ ಬೆಂಕಿ ಅವಘಡ ಸಂಭವಿಸಿದೆ. ರೈತ ಪರಮೇಶ್ ಎಂಬುವರಿಗೆ ಸೇರಿದಂತ ಕೊಬ್ಬರಿ ಗೋದಾಮು ಹೊತ್ತಿ ಉರಿದಿದೆ.
ಕೊಬ್ಬರಿ ಗೋದಾಮಿಗೆ ಬೆಂಕಿ ಬಿದ್ದಂತ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಘಡದಲ್ಲಿ ರೈತ ಪರಮೇಶ್ ಗೆ ಸೇರಿದಂತೆ ಲಕ್ಷಾಂತರ ಮೌಲ್ಯದ ಕೊಬ್ಬರು ಸುಟ್ಟು ಭಸ್ಮವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ- ಸಲೀಂ ಅಹ್ಮದ್
BREAKING: ರಾಯಚೂರಲ್ಲಿ ಖೋಟಾ ನೋಟು ದಂಧೆ ಮೇಲೆ ಪೊಲೀಸರ ದಾಳಿ: ಕಾನ್ಸ್ ಸ್ಟೇಬಲ್ ಸೇರಿ ನಾಲ್ವರು ಅರೆಸ್ಟ್