ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಬಿಹೆಚ್ ರಸ್ತೆಯಲ್ಲಿನ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಗೆ ಆವರಿಸಿದ್ದರಿಂದಾಗಿ ಧಗಧಗಿಸಿ ಹೊತ್ತಿ ಉರಿದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಬಿಹೆಚ್ ರಸ್ತೆಯ ಕೋಯಾ ಶಾಲೆಯ ಎದುರು ಭಾಗದ ಕಾಂಪ್ಲೆಕ್ಸನಲ್ಲೀ ಬೆಂಕಿ ದುರಂತ ನಡೆದಿದೆ. ಬೆಂಕಿಗೆ ಕಾರಣ ಆಯಿಲ್ ಶೇಖರಣ ಎಂಬುದಾಗಿ ಹೇಳಲಾಗುತ್ತಿದೆ.
ಇದಷ್ಟೇ ಅಲ್ಲದೇ ಅಂಗಡಿಯಲ್ಲಿ ರೆಫ್ರಿಜರೇಟರ್, ವಾಷಿಂಗ್ ಮಿಷಿನ್ ರಿಪೇರಿ ಮಾಡಿ, ಅಂಗಡಿಯ ಮಹಡಿ ಮೇಲೆ ಶೇಖರಣೆ ಮಾಡಲಾಗಿತ್ತು. ಇದೇ ಬಿಲ್ಡಿಂಗ್ ನಲ್ಲಿ ವೇಲ್ಡಿಂಗ್ ಮಾಡುತ್ತಿದ್ದರಿಂದ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹೊತ್ತಿಕೊಂಡಿರುವಂತ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಯ ಹರಹಾಸದ ನಂತ್ರ ಬೆಂಕಿಯ ಕೆನ್ನಾಲಿಗೆ ನಿಯಂತ್ರಣಕ್ಕೆ ಬಂದಿದೆ. ಬೆಂಕಿಗೆ ನಿಖರ ಕಾರಣ ಏನೆಂದು ತನಿಖೆಯ ನಂತ್ರ ತಿಳಿಯಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ
ಮಾರ್ಚ್.13ರಂದು ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ | Karnataka Cabinet Meeting
ಸಾರ್ವಜನಿಕರೇ ಗಮನಿಸಿ : ವರ್ಷಕ್ಕೊಮ್ಮೆಯಾದರೂ ಈ 10 `ರಕ್ತ ಪರೀಕ್ಷೆ’ ಮಾಡಿಸಲೇಬೇಕು.!
GOOD NEWS : ಹೃದಯಾಘಾತ, ಪಾರ್ಶ್ವವಾಯುಗೆ ಲಸಿಕೆ ಕಂಡು ಹಿಡಿದ ಚೀನಾ ವಿಜ್ಞಾನಿಗಳು | Heart Attack Stroke Vaccine