ಉತ್ತರ ಪ್ರದೇಶ: ಈ ಹಿಂದೆ ಎರಡು ಬಾರಿ ಪ್ರಯಾಗ್ ರಾಜ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಹಲವು ಕುಠೀರಗಳು ಬೆಂಕಿಗೆ ಆಹುತಿಯಾಗಿದ್ದವು. ಈಗ ಮತ್ತೆ ಪ್ರಯಾಗ್ ರಾಜ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕುಠೀರಗಳು ಧಗ ಧಗಿಸಿ ಹೊತ್ತಿ ಉರಿಯುತ್ತಿವೆ.
ಇಲ್ಲಿನ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ತೆರಳುತ್ತಿದ್ದಾರೆ. ಕೆಲವರು ಅಲ್ಲಿಯೇ ಬೀಡು ಬಿಟ್ಟಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಠೀರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಗ್ ರಾಜ್ ನ ಸೆಕ್ಟರ್ 18, 19ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಡೇರೆಗಳು ಹೊತ್ತಿ ಉರಿಯುತ್ತಿರುವುದಾಗಿ ತಿಳಿದು ಬಂದಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾವೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
प्रयागराज – महाकुंभ में फिर लगी आग
सेक्टर 19 के मोरी मार्ग पर लगी आग
कल्पवासियों के खाली पड़े टेंट्स में लगी आगमौके पर फायर ब्रिगेड की गाड़ियों ने पाया काबू
कोई जनहानि नहीं#Kumbhfire #aag #Mahakumbh #Kumbh2025 #kumbhmela2025prayagraj #Prayagraj #MahaKumbh2025 #KumbhMela2025… pic.twitter.com/Al22UmRH1m— Sujit Gupta (@sujitnewslive) February 15, 2025
ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
BREAKING: ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಮೇಲೆ ಆಟೋ ಚಾಲಕನಿಂದ ಹಲ್ಲೆ: ಕುಸಿದು ಬಿದ್ದು ಸಾವು
ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣಕ್ಕೆ HDK ತಕರಾರು: ಡಿಸಿಎಂ ಡಿ.ಕೆ. ಶಿವಕುಮಾರ್