ಬೆಂಗಳೂರು: ಪೀಣ್ಯ ಸಮೀಪದ ಹೆಚ್ ಎಂ ಟಿಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರ ಕಡಿದು, ಟ್ಯಾಕ್ಸಿಕ್ ಚಿತ್ರತಂಡದಿಂದ ಚಿತ್ರೀಕರಣ ಮಾಡಲಾಗಿತ್ತು. ಇಂತಹ ಚಿತ್ರ ತಂಡದ ವಿರುದ್ಧ ಅರಣ್ಯ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದು, ಬೆಂಗಳೂರು ಹೊರವಲಯದ ಹೆಚ್ ಎಂ ಟಿಯಲ್ಲಿನ ಅರಣ್ಯ ಭೂಮಿಯಲ್ಲಿನ ಮರಗಳನ್ನು ಕಟಾವು ಮಾಡಿ, ಚಿತ್ರೀಕರಣಕ್ಕೆ ಸೆಟ್ ನಿರ್ಮಿಸಲಾಗಿದೆ. ಈ ಹಿನ್ನಲೆಯಲ್ಲಿ ಕೆವಿನ್ ಸಂಸ್ಥೆ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹೆಚ್ ಎಂ ಟಿ ಜನರಲ್ ಮ್ಯಾನೇಜರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಂದಹಾಗೇ ಈ ಹಿಂದೆ ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ರಮವಾಗಿ ಅನುಮತಿಯಿಲ್ಲದೇ ಹೆಚ್ ಎಂ ಟಿಯ ಅರಣ್ಯ ಭೂಮಿಯಲ್ಲಿ ಮರಗಳನ್ನು ಕಡಿಯಲಾಗಿತ್ತು. ಈ ಮೊದಲು ಹೇಗಿತ್ತು, ಚಿತ್ರೀಕರಣಕ್ಕಾಗಿ ಮರಗಳ ನಾಶದ ಬಳಿಕ ಹೇಗಿದೆ ಭೂಮಿ ಎಂಬ ಸ್ಯಾಟಲೈಟ್ ಚಿತ್ರವನ್ನು ಅರಣ್ಯ ಸಚಿವರು ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ಅರಣ್ಯ ಇಲಾಖೆಯಿಂದ ಅಕ್ರಮವಾಗಿ ಮರಕಡಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
BIG NEWS : ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 1 ತಿಂಗಳಲ್ಲಿ 140 ಕೆಜಿ ಗಾಂಜಾ ಜಪ್ತಿ, 64 ಜನ ಅರೆಸ್ಟ್!
BREAKING : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ : ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ