ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ, ಅಸಭ್ಯವಾದಂತ ವೀಡಿಯೋ ಹರಿಬಿಟ್ಟವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ವಕೀಲರಾದಂತ ದೀಪು ಸಿ.ಆರ್ ಎಂಬುವರು ಸದಾಶಿವನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನಲ್ಲಿ ದಿನಾಂಕ 07-11-2025ರಂದು ಬೆಳಗ್ಗೆ 9 ಗಂಟೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆ ಹತ್ತಿರ ಇದ್ದಾಗ ನನ್ನ ಇನ್ ಸ್ಟಾಗ್ರಾಂ ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನಕಾರಿ ಮತ್ತು ಅಸಭ್ಯವಾಗಿ ವೀಡಿಯೋ ಭಿತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಂತ ವೀಡಿಯೋದಲ್ಲಿ ಟಿವಿ9 ಬ್ರೇಕಿಂಗ್ ನ್ಯೂಸ್ ಪ್ರಸಾರವಾಗುತ್ತಿದೆ ಎನ್ನುವ ರೀತಿಯಲ್ಲಿ ಎ1 ಟೆಕ್ನಾಲಜಿ ಬಳಸಿ ಎಡಿಟ್ ಮಾಡಿ ಸುಳ್ಳು ವೀಡಿಯೋ ಸೃಷ್ಠಿಸಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಭಿತ್ತರಿಸಲಾಗಿದೆ ಎಂದಿದ್ದಾರೆ.
ಈ ವೀಡಿಯೋ ಪೋಸ್ಟ್ ಗಳನ್ನು ಹಾಕಿರುವುದರಿಂದ ಸಮಾಜದಲ್ಲಿ ಅವರಿಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ದುರುದ್ದೇಶದಿಂದ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶ ಮತ್ತು ಸಮಾಜಕ್ಕೆ ಸುಳ್ಳು ಮಾಹಿತಿ ಭಿತ್ತರಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಹೀಗಾಗಿ ಅಂತಹ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಮನವಿ ಆಧರಿಸಿ ಸದಾಶಿವನಗರ ಠಾಣೆಯಲ್ಲಿ ಕನ್ನಡ ಚಿತ್ರರಂಗ ಎನ್ನುವಂತ ಇನ್ಟಾ ಗ್ರಾಂ ಖಾತೆಯ ವಿರುದ್ಧ ಬಿಎನ್ಎಸ್ 2023ರ ಕಲಂ 192, 336(4), 353(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಣೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಮಹತ್ವದ ಹೆಜ್ಜೆ
BREAKING: ‘ಸಾಗರ ನಗರಸಭೆ’ಗೆ ಆಡಳಿತಾಧಿಕಾರಿಯಾಗಿ ‘ಜಿಲ್ಲಾಧಿಕಾರಿ’ ನೇಮಿಸಿ ಸರ್ಕಾರ ಆದೇಶ








