ಬೆಂಗಳೂರು: ಧರ್ಮಸ್ಥಳದ ಪೊಲೀಸ್ ಠಾಣೆ ಪಿಎಸ್ಐ ಕಿಶೋರ್ ಎಂಬುವರು ತಮ್ಮ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪತ್ನಿ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಮಂಗಳೂರಿನ ಉಜಿರೆ ಬಳಿಯ ಧರ್ಮಸ್ಥಳದ ಪೊಲೀಸ್ ಠಾಣೆ ಪಿಎಸ್ಐ ಕಿಶೋರ್ ವಿರುದ್ಧ ಅವರ ಪತ್ನಿ ವರ್ಷಾ ಎಂಬುವರು ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಧರ್ಮಸ್ಥಳ ಪೊಲೀಸ್ ಠಾಣೆ ಪಿಎಸ್ಐ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ವೇಳೆ ಮಾತನಾಡಿದಂತ ಅವರು ನನ್ನ ಪತಿ, ಅತ್ತೆ, ಮಾವ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ಒಬ್ಬಳೇ ಮಗಳೆಂದು ನನ್ನ ಅಪ್ಪ, ಅಮ್ಮ ಸಾಕಷ್ಟು ಹಣ ನೀಡಿದ್ದರು. ಆದರೂ ಮತ್ತೆ ಮತ್ತೆ ನನ್ನನ್ನು ಹಣಕ್ಕೆ ಪತಿ ಕಿಶೋರ್, ಅತ್ತೆ, ಮಾವ ಪೀಡಿಸಿ ಕಿರುಕುಳ ನೀಡಿದ್ದಾಗಿ ಹೇಳಿದ್ದಾರೆ.
ಅಪ್ಪ-ಅಮ್ಮ ಮರ್ಯಾದೆಗೆ ಹೆದರಿ ಒಂದು ವರ್ಷದಿಂದ ಸಹಿಸಿಕೊಂಡಿದ್ದೆನು. ಮನೆಯ ಕೊಠಡಿಯಲ್ಲಿ ಕೂಡಿ ಹಾಕಿ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದಾರೆ. ದಿಂಬಿನಿಂದ ಉಸಿರುಗಟ್ಟಿಸಿ ನನ್ನ ಕೊಲೆಗೂ ಯತ್ನಿಸಿದ್ದಾರೆ. ಜೀವ ಉಳಿಸಿಕೊಳ್ಳುವು ಬೇರೆ ಮಾರ್ಗವಿಲ್ಲದೇ ನಾನು ಪೋಷಕರಿಗೆ ವಿಷಯ ತಿಳಿಸಿದ್ದೆ ಎಂದರು.
ನಾನು ಧರ್ಮಸ್ಥಳದಿಂದ ಅಪ್ಪ-ಅಮ್ಮನಿಗೆ ಮಾಹಿತಿ ನೀಡಿದ ಬಳಿಕ, ಬೆಂಗಳೂರಿಗೆ ಬರುವಂತೆ ತಿಳಿಸಿದ್ರು. ಧರ್ಮಸ್ಥಳದಿಂದ ಬೆಂಗಳೂರಿಗೆ ಬಂದು ದೂರು ನೀಡಿದ್ದೇನೆ. ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ಹೇಳಿದರು.
ನನ್ನ ದೇಹದ ಹಲವು ಭಾಗಗಳಲ್ಲಿ ರಕ್ತ ಹೆಪ್ಪು ಗಟ್ಟಿದೆ. ಪತ್ನಿ, ಅತ್ತೆ, ಮಾವ ಮಾಡಿದಂತ ಹಲ್ಲೆಯಿಂದ ನೋಂದಿದ್ದೇನೆ. ರಕ್ತ ಹೆಪ್ಪುಗಟ್ಟಿದ್ದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಪದೇ ಪದೇ ಹಣ ತಂದುಕೊಡುವಂತೆ ಪತಿ, ಅತ್ತೆ, ಮಾಪ ಪೀಡಿಸುತ್ತಿದ್ದಾರೆ ಎಂಬುದಾಗಿ ಧರ್ಮಸ್ಥಳ ಪಿಎಸ್ಐ ಕಿಶೋರ್ ಪತ್ನಿ ವರ್ಷಾ ಅಲವತ್ತುಕೊಂಡಿದ್ದಾರೆ.
BIG BREAKING: ಹಾಲಿನ ದರ ಏರಿಕೆ ಬೆನ್ನಲ್ಲೇ ‘ವಿದ್ಯುತ್ ದರ’ ಏರಿಕೆ ಶಾಕ್: ಪ್ರತಿ ಯೂನಿಟ್ ಗೆ ’36 ಪೈಸೆ’ ಹೆಚ್ಚಳ
BREAKING NEWS: ಏಪ್ರಿಲ್.2ರಂದು 384 KAS ಹುದ್ದೆಗಳ ನೇಮಕಾತಿಗೆ ‘ಮುಖ್ಯ ಪರೀಕ್ಷೆ’: KPSC ಮಾಹಿತಿ | KAS Main Exam