ಬೆಂಗಳೂರು: ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸುಮಾರು 12 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಯತ್ನಿಸಿದ ಆರೋಪದಡಿ 14 ಮಂದಿ ವಿರುದ್ಧ ಆವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆ ಮೂಲಕ ನಕಲಿ ದಾಖಲೆ ಸೃಷ್ಠಿಸಿದ ಆರೋಪಿಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾಧ ಎಂಬುವರಿಂದ ಜಿಪಿಎ ಮಾಡಿಕೊಂಡಿಸಿಕೊಂಡಿದ್ದ ವೆಂಕಟಪ್ಪ ಎಂಬುವರು ನೀಡಿದ ದೂರಿನ ಮೇರೆಗೆ 14 ಮಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS), 2023 (U/s-r/w 3(5), 335, 335(ಎ(iii), 337, 339, 340, 341, 323, 324, 329, 126, 351 (2, 351 (4, 351), 242, 246, 314, 318, 319, 322, 308) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಪೊಲೀಸರು ಈ ಸಂಬಂಧ ಸತ್ವ ಗ್ರೂಪ್ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಅಶ್ವಿನ್ ಸಂಚೆಟಿ ಎಂಬುವರನ್ನ ವಶಕ್ಕೆ ಪಡೆದುಕೊಂಡಿದ್ಧಾರೆ.
ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಾಪುರ ಗ್ರಾಮದ ಸರ್ವೇ ನಂಬರ್ 20, 21, 44/1 ನಲ್ಲಿರುವ ಸುಮಾರು 12 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟರ್ ನೋಂದಣಿ ಕಚೇರಿಯಲ್ಲಿ ಖಾತಾ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಕಬಳಿಕೆಗೆ ಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ಧಾರೆ.
ಜಮೀನಿನ ಮೂಲ ಮಾಲೀಕರಾದ ರಾಧ ಅವರು ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು ಎಂದಿದ್ದಾರೆ.
1978ರಲ್ಲಿ ಮುದ್ದಪ್ಪ ಎಂಬುವರಿಂದ ತನ್ನ ಪತಿ ಕೃಷ್ಣನ್ ಅವರು ಜಮೀನು ಖರೀದಿಸಿದ್ದರು. 1986ರಲ್ಲಿ ಕೃಷ್ಣನ್ ಮೃತರಾಗಿದ್ದರು. ಹೀಗಾಗಿ ಪತಿ ಹೆಸರಿನಲ್ಲಿದ್ದ ದಾಖಲಾತಿಗಳನ್ನ ನನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದೆ. ಇತ್ತೀಚೆಗೆ ಜಮೀನಿನ ಬಳಿ ಹೋಗಿದಾಗ ಅಶ್ವಿನ್ ಸಂಚೆಟಿ ಸೇರಿ ಐವರು ವ್ಯಕ್ತಿಗಳು ರಾಧ ಅವರ ಮಕ್ಕಳೆಂದು ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು ಎಂಬುದು ಗಮನಕ್ಕೆ ಬಂದಿತ್ತು. 1978ರಲ್ಲಿ ನೋಂದಣಿಯಾಗಿದ್ದ ಕ್ರಯಪತ್ರವನ್ನ ಸ್ಯಾಂಪ್ ಪೇಪರ್ ನಲ್ಲಿ ಟೈಪ್ ಮಾಡಿಸಿಕೊಂಡು ಉಪನೋಂದಣಾಧಿಕಾರಿಗಳ ಬಳಿ ಅಸಲು ನೋಂದಣಿ ಪತ್ರವೆಂದು ಬಿಂಬಿಸಿದ್ದರು. ಖರೀದಿ ಹಾಗೂ ಮಾರಾಟ ಮಾಡಿದವರ ಸುಳ್ಳು ಸಹಿ ಹಾಕಿ ನಮೂದಾಗಿದ್ದ ದಿನಾಂಕವನ್ನ ಆರೋಪಿಗಳು ತಿದ್ದಿದ್ದಾರೆ. ಆದರೆ ತನ್ನ ಬಳಿ 1974ರಿಂದ ಜಮೀನಿನ ಮದರ್ ದೀಡ್ ತನ್ನ ಬಳಿಯಿದೆ ಎಂದು ದೂರಿನಲ್ಲಿ ರಾಧ ಅವರ ಪರವಾಗಿ ವೆಂಕಟಪ್ಪ ತಿಳಿಸಿದ್ದಾರೆ.
ಅಕ್ರಮ ಹಣ ಸಂಪಾದನೆ ಮಾಡಲು ಒಳಸಂಚು ರೂಪಿಸಲು ಪ್ರತ್ಯೇಕ ಮೂರು ವಂಚಕರ ತಂಡಗಳು ನಕಲಿ ದಾಖಲಾತಿಗಳನ್ನ ಸೃಷ್ಟಿಸಿ, ಜಮೀನು ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಜಮೀನು ಅತಿಕ್ರಮಣ ಬಗ್ಗೆ ಪ್ರಶ್ನಿಸಿದಕ್ಕೆ ಬೆದರಿಕೆ ಹಾಕಿದ್ಧಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಂಚನೆ ಸಂಬಂಧ ದೂರಿನ ಮೇರೆಗೆ 14 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







ಸಾಗರ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕಲ್ಮನೆಯಲ್ಲಿ ನಡೆಸಿದ ‘ಜನಸಂಪರ್ಕ ಸಭೆ’ಗೆ ಭರ್ಜರಿ ರೆಸ್ಪಾನ್ಸ್!
BREAKING: ಮಹಿಳಾ ನೌಕರರಿಗೆ ಮಾಸಿಕ 1 ದಿನ ವೇತನ ಸಹಿತ ‘ಋತುಚಕ್ರ ರಜೆ’: ರಾಜ್ಯ ಸರ್ಕಾರ ಅಧಿಕೃತ ಆದೇಶ








