ಉತ್ತರ ಕನ್ನಡ: ಜೋಗ್ ಫಾಲ್ಸ್ ನ ಅಪಾಯದ ಪ್ರದೇಶಕ್ಕೆ ತೆರಳಿದ್ದಂತ ಬೆಂಗಳೂರು ಮೂಲದ ಯೂಟ್ಯೂಬರ್ ವೀಡಿಯೋ ಮಾಡಿದ್ದರು. ಇಂತವರ ವಿರುದ್ಧ FIR ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಜೋಗ್ ಫಾಲ್ಸ್ ಗೆ ಬೆಂಗಳೂರಿನ ಯೂಟ್ಯೂಬರ್ ತೆರಳಿದ್ದರು. ರಾಜಾ ಫಾಲ್ಸ್ ಬೀಳೋ ಜಾಗಕ್ಕೆ ತೆರಳಿದ್ದಂತ ಯೂಟ್ಯೂಬರ್ ಅಪಾಯಕಾರಿ ಸ್ಥಳದ ವೀಡಿಯೋ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಉತ್ತರ ಕನ್ನಡ ಜಿಲ್ಲಾಡಳಿತವು ಬೆಂಗಳೂರಿನ ಜಾಲಹಳ್ಳಿ ಮೂಲದ ಗೌತಮ್ ಅರಸು(32) ಹಾಗೂ ಸೊರಬ ಮೂಲದ ಗೈಡ್ ಸಿದ್ದರಾಜು ವಿರುದ್ಧ ಪ್ರಕರಣ ದಾಖಲಿಸಿದೆ.
ಈ ಇಬ್ಬರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಯಂ ಪ್ರೇರಿತ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಅಂದಹಾಗೆ ರಾಜಾ ಫಾಲ್ಸ್ ನ ಬಂಡೆ ಹತ್ತಿರ ನಿಂತುಕೊಂಡು ಇಬ್ಬರು ವೀಡಿಯೋ ಮಾಡಿದ್ದರು. ಅದನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿತ್ತು. ಈ ವೀಡಿಯೋ ವೈರಲ್ ಆದ ಬಳಿಕ, ನೆಟ್ಟಿಗರು ಅಪಾಯಕಾರಿ ಸ್ಥಳಕ್ಕೆ ತೆರಳಿ ವೀಡಿಯೋ ಮಾಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈಗ ಇಬ್ಬರು ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಾಗಿದೆ.
BREAKING: ಸ್ಯಾಂಡಲ್ ವುಟ್ ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಕೇಸ್ ಹಿಂಪಡೆದ ಸಂತ್ರಸ್ತೆ
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು