ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರಲ್ಲಿ ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಮತದಾನ ಮಾಡುವ ಪೋಟೋ ಮೊಬೈಲ್ ನಲ್ಲಿ ತೆಗೆದು, ಅದನ್ನು ವಾಟ್ಸ್ ಆಪ್ ನಲ್ಲಿ ಹರಿಬಿಟ್ಟಂತ ಘಟನೆ ನಡೆದಿದೆ.
ಪುತ್ತೂರಲ್ಲಿ ಮತದಾನ ಮಾಡಿರುವ ಆರ್ಯಾಪುರ ನಿವಾಸಿ, ಯುವ ಕಾಂಗ್ರೆಸ್ ಮುಖಂಡ ರಂಜಿತ್ ಬಂಗೇರ ತಮ್ಮ ಬೆರಳು ಹಾಗೂ ಮತಯಂತ್ರದ ಪೋಟೋ ಸಹಿತ ಮತ ಚಲಾಯಿಸುವ ಪೋಟೋ ತೆಗೆದು ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಾಕಿದ್ದರು.
ರಂಜಿತ್ ಬಂಗೇರ ಅವರು ವಾಟ್ಸಾಪ್ ನಲ್ಲಿ ಹಾಕಿದ್ದಂತ ಮತದಾನ ಮಾಡೋ ಪೋಟೋ ವೈರಲ್ ಕೂಡ ಆಗಿತ್ತು. ಇದನ್ನು ಗಮನಿಸಿದಂತ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಪುತ್ತೂರು ಗ್ರಾಮಾಂತರ ಠಾಣೆಗೆ ಯುವ ಕಾಂಗ್ರೆಸ್ ಮುಖಂಡ ರಂಜಿತ್ ಬಂಗೇರ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನೆಬ್ರಾಸ್ಕಾ ನಗರದಲ್ಲಿ ಭೀಕರ ಸುಂಟರಗಾಳಿಯಿಂದಾಗಿ ಒಮಾಹಾ ವಿಮಾನ ನಿಲ್ದಾಣ ಬಂದ್
ಇನ್ಮುಂದೆ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ