ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಜೆಪಿಯಿಂದ ಪೋಸ್ಟರ್ ಅಭಿಯಾನವನ್ನು ಆರಂಭಿಸಲಾಗಿತ್ತು. ಬೆಂಗಳೂರಿನ ಹಲವೆಡೆ ಗೋಡೆಗಳಿಗೆ ಬಿಜೆಪಿಯಿಂದ ಪೋಸ್ಟರ್ ಕೂಡ ಅಂಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ, ಎನ್.ರವಿಕುಮಾರ್ ಸೇರಿದಂತೆ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ಪೋಸ್ಟರ್ ಅಭಿಯಾನ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಪಿಎಸ್ಐ ಶಶಿಧರ ವಣ್ಣೂರ ಅವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಸಿ.ಟಿ ರವಿ ಸೇರಿದಂತೆ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪರಿಷತ್ ಸದಸ್ಯ ಸಿ.ಟಿ ರವಿ, ಎನ್ ರವಿ ಕುಮಾರ್ ಸೇರಿದಂತೆ ಇತರೆ 13 ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಕ್ರಮವಾಗಿ ರಸ್ತೆಯಲ್ಲಿ ಗುಂಪು ಸೇರಿ ಸಾರ್ವಜನಿಕರಿಗೆ ಅಡ್ಡಿ ಆರೋಪದಲ್ಲಿ ಈ ಕೇಸ್ ದಾಖಲಾಗಿದೆ.
BIG NEWS: ಹೊಸ ವರ್ಷಾಚರಣೆ: ಬೆಂಗಳೂರಿನ ‘MG ರಸ್ತೆ’ ಸುತ್ತಮುತ್ತಲಲ್ಲಿ ಬರೋಬ್ಬರಿ ’15 ಮೆಗಾ ಟನ್ ತ್ಯಾಜ್ಯ ಸಂಗ್ರಹ’
ಜ.5ರಂದು ಸಾಗರದಲ್ಲಿ ‘ಸಾಗರೋತ್ಸವ-2025’: ಭೂಮಣ್ಣಿ ಬುಟ್ಟಿ ಸ್ಪರ್ಧೆ, ಪವಾಡ ಬಯಲು ಕಾರ್ಯಕ್ರಮ ಆಯೋಜನೆ