ಚಿತ್ರದುರ್ಗ: ಚುನಾವಣೆ ವೇಳೆಯಲ್ಲಿ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಮೋದಿ ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂಬುದಾಗಿ ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ಹೇಳಿಕೆ ನೀಡಿದ್ದರು. ಇಂತಹ ಅವರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಲ್ಲಿ ಸಮುಧಾಯ ಭವನ ಉದ್ಘಾಟನೆ ಕಾರ್ಯಕ್ರಮದ ವೇಳೆಯಲ್ಲಿ ಮಾತನಾಡಿದ್ದಂತ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ಅವರು ಲೋಕಸಭಾ ಚುನಾವಣೆಯ ಹೊತ್ತಿಲ್ಲೇ ಸಿಲಿಂಡರ್ ಬೆಲೆಯನ್ನು ಕೇವಲ 100 ರೂ ಇಳಿಸಿದ್ದಾರೆ. ನನ್ನ ಕೈಗೆ ಮೋದಿ ಏನಾದರೂ ಸಿಕ್ಕಿದ್ದರೇ ಕಾಲಲ್ಲಿ ಇರೋದನ್ನು ತೆಗೆದು ಹೊಡೆಯುತ್ತಿದ್ದೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಜೆಎಸ್ ಮಂಜುನಾಥ್ ಹೇಳಿಕೆಯನ್ನು ಆಕ್ಷೇಪಿಸಿದ್ದಂತ ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷ ಕಲ್ಲೇಶಯ್ಯ ಎಂಬುವರು ಚಿತ್ರದುರ್ಗ ನಗರ ಠಾಣೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ದೂರು ಆಧರಿಸಿ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿಎಸ್ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕರೇ ಗಮನಿಸಿ: ‘ರೈಲು’ಗಳ ಮೇಲೆ ‘ಕಲ್ಲು ತೂರಾಟ’ವಾದ್ರೇ ‘ಈ ಸಹಾಯವಾಣಿ’ಗೆ ಕರೆ ಮಾಡಿ
ದೇಶಾದ್ಯಂತ ‘CAA’ ಜಾರಿ ಸಂಬಂಧ ‘ಕೇಂದ್ರ ಸರ್ಕಾರ’ದಿಂದ ಅಧಿಸೂಚನೆ ಪ್ರಕಟ | CAA Rules