ಬೆಂಗಳೂರು: ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಸಿ, ಹೆಸರು ಗಳಿಸಿದ್ದಂತ ಖ್ಯಾತ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿದ್ದಲ್ಲದೇ, ಈ ವೀಡಿಯೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಕಾರಣಕ್ಕಾಗಿ ಅವರ ವಿರುದ್ಧ ಸಲ್ಲಿಸಲಾಗಿದ್ದ ದೂರಿನ ಬಳಿಕ ಈ ಎಫ್ಐಆರ್ ದಾಖಲಾಗಿದೆ.
ಹೌದು.. ಸ್ನೇಹಿತೆಯ ಖಾಸಗಿ ವೀಡಿಯೋ ಹಾಗೂ ಪೋಟೋಗಳನ್ನು ಕದ್ದು ಹಂಚಿಕೆ ಮಾಡಿದ್ದಾರೆ. ಅಲ್ಲದೇ ಈ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಬಾರದು ಅಂದ್ರೆ 2 ಕೋಟಿ ರೂ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬುದಾಗಿ ಪಾರ್ವತಿ ಎಂಬುವರು ದೂರು ನೀಡಿದ್ದರು.
ಈ ದೂರು ಆಧರಿಸಿ ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬದ ಸದಸ್ಯೆ ಹಾಗೂ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ದ ಪ್ರಕರಣ ದಾಖಲಾಗಿದೆ.
ಅಂದಹಾಗೇ ತಾನು ಕೆಲಸ ಮಾಡುತ್ತಿದ್ದಂತ ಕಂಪನಿ ಮಾಲೀಕರನ್ನೇ ಪಾರ್ವತಿ ಮದುವೆಯಾಗಿದ್ದರು. ಇಂತಹ ಪಾರ್ವತಿಗೆ ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು, ಸಿರಿಯಲ್ ನಟಿ ಎಂಬುದಾಗಿ ಆಶಾ ಜೋಯಿಸ್ ಪರಿಚಯ ಮಾಡಿಕೊಂಡಿದ್ದರು.
ಪಾರ್ವತಿಗೆ ತನ್ನ ಪತಿಗೆ ಬ್ಲ್ಯಾಕ್ ಮೇಲ್ ಮಾಡುವಂತೆ ಆಶಾ ಹೇಳಿಕೊಟ್ಟಿದ್ದರು. ಆದರೇ 2 ಕೋಟಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲು ಪಾರ್ವತಿ ನಿರಾಕರಿಸಿದ್ದರು. ಹೀಗಾಗಿ ಪಾರ್ವತಿ ಮೊಬೈಲ್ ನಿಂದ ಖಾಸಗಿ ವೀಡಿಯೋ, ವಾಯ್ಸ್ ರೆಕಾರ್ಡ್ ಕದ್ದಿದ್ದಂತ ಆಶಾ ಜೋಯಿಸ್, ಪರಿಚಯಸ್ಥರಿಗೆ ಕಳುಹಿಸಿದ್ದರು. ಈ ವಿಷಯ ತಿಳಿದಂತ ಪಾರ್ವತಿ ತನ್ನ ಘನತೆಗೆ ಕುಂದುಂಟಾಗಿದೆ, ನನ್ನ ಖಾಸಗಿ ಡೇಟಾ ಕದಿದ್ದಾರೆ ಎಂಬುದಾಗಿ ಆರೋಪಿಸಿ ಆಶಾ ಜೋಯಿಸ್ ಮೇಲೆ ದೂರು ನೀಡಿದ ಪರಿಣಾಮ, ಎಫ್ಐಆರ್ ದಾಖಲಾಗಿದೆ.
BREAKING: ಇಂದೋರ್ ನಲ್ಲಿ ಆಸ್ಟ್ರೇಲಿಯಾದ ಮಹಿಳಾ ವಿಶ್ವಕಪ್ ಆಟಗಾರ್ತಿಗಳಿಗೆ ಕಿರುಕುಳ: ಆರೋಪಿ ಬಂಧನ
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ








