ಬೆಂಗಳೂರು: ನಗರದಲ್ಲಿ ಶಾಕಿಂಗ್ ಎನ್ನುವಂತೆ ಸಾರ್ವಜನಿಕರವಾಗಿ ಮಹಿಳೆಯೊಬ್ಬರ ಮುಂದೆಯೇ ಕಾಮುಕನೊಬ್ಬ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ ತೋರಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿಯೇ ಮಹಿಳೆಯ ಎದುರು ಹಸ್ತಮೈಥುನವನ್ನು ಕಾಮುಕನೊಬ್ಬ ಮಾಡಿದ್ದಾನೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಕಾಮುಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳೆಯೊಬ್ಬರು ಬೆಳಗ್ಗೆ ತಮ್ಮ ನಾಯಿಯೊಂದಿಗೆ ವಾಕಿಂಗ್ ಗೆ ತೆರಳಿದ್ದಾಗ, ಹಿಂದಿನಿಂದ ಬಂದಂತ ವ್ಯಕ್ತಿಯೊಬ್ಬ ಮೇಡಂ ಮೇಡಂ ಅಂತ ಕರೆದಿದ್ದಾನೆ. ಆ ವೇಳೆಯಲ್ಲಿ ಮಹಿಳೆ ಹಿಂದಿರುಗಿ ನೋಡಿದಾಗ ಕಾಮುಕ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.
ಮಹಿಳೆ ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಲೈಂಗಿಕ ಕಿರುಕುಳ ನೀಡಿದ ಮತ್ತು ಅಶ್ಲೀಲ ಕೃತ್ಯ ನಡೆಸಿದ ಆರೋಪದಡಿ ಕಾಮುಗನ ವಿರುದ್ಧ ಎಫ್ಐಆರ್ ದಾಖಲಿಸಿ, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ರಾಜ್ಯದ ಸರ್ಕಾರಿ ನೌಕರ’ರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ನೋಂದಣಿ ಕುರಿತು ಮಹತ್ವದ ಮಾಹಿತಿ
BREAKING: ಪಾಕಿಸ್ತಾನ ಸುಪ್ರೀಂ ಕೋರ್ಟ್ ಆವರಣದಲ್ಲಿ ಭಾರೀ ಸ್ಫೋಟ: ಕನಿಷ್ಠ 15 ಜನರಿಗೆ ಗಾಯ








