ಮಂಗಳೂರು: ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆ ಕದಡುವಂತ ಪೋಸ್ಟ್ ಹಾಕಿದಂತ ಶರಣ್ ಪಂಪವೇಲ್ ಹಾಗೂ ಪುನೀತ್ ಅತ್ತಾವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶರಣ್ ಪಂಪ್ ವೇಲ್ ಹಾಗೂ ಪುನೀತ್ ಅತ್ತಾವರ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ, ಕೋಮು ಗಲಭೆಗೆ ಪ್ರಚೋದನೆ ನೀಡುವಂತೆ ಮಾಡಿದ್ದರು. ಅಲ್ಲದೇ ಮುಸ್ಲೀಂ ಮುಖಂಡರೊಬ್ಬರ ಜೊತೆಗೆ ಮಾತನಾಡಿದ್ದಂತ ಆಡಿಯೋವೊಂದನ್ನು ಹಾಕಿ, ವೈರಲ್ ಮಾಡಿದ್ದರು.
ಈ ಹಿನ್ನಲೆಯಲ್ಲಿ ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶರಣ್ ಪಂಪ್ ವೇಲ್, ಪುನೀತ್ ಅತ್ತಾವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮತ್ತೊಂದೆಡೆ ಮುಸ್ಲೀಂ ಮುಖಂಡರ ಚಾಲೆಂಡ್ ಸ್ವೀಕರಿಸಿ, ಇಂದು ಆರ್ ಎಸ್ ಎಸ್, ಭಜರಂಗದಳದಿಂದ ಬಿಸಿ ರೋಡ್ ಜಾಥಾಗೆ ಕರೆ ನೀಡಲಾಗಿದೆ. ಅದಕ್ಕೆ ಪೊಲೀಸರು ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇಂದು ನಾಗಮಂಗಲದ ಅಹಿತಕರ ಘಟನಾ ಸ್ಥಳಕ್ಕೆ ‘ಬಿಜೆಪಿ ಸತ್ಯಶೋಧನಾ ತಂಡ’ ಭೇಟಿ
ಇಂದು ‘ಈದ್ ಮಿಲಾದ್’ ಹಬ್ಬ: ಬೆಂಗಳೂರಲ್ಲಿ ‘ಪೊಲೀಸ್ ಇಲಾಖೆ’ಯ ಈ ಮಾರ್ಗಸೂಚಿ ಕ್ರಮ ಪಾಲನೆ ಕಡ್ಡಾಯ