ಆನೇಕಲ್: ಶಾಕಿಂಗ್ ಘಟನೆ ಎನ್ನುವಂತೆ ಸ್ಕ್ಯಾನಿಂಗ್ ಗೆ ತೆರಳಿದಂತ ಹೆಣ್ಣು ಮಕ್ಕಳ ಖಾಸಗಿ ಅಂಗ ಮುಟ್ಟಿ, ಲೈಂಗಿಕ ಕಿರುಕುಳವನ್ನು ರೆಡಿಯಾಲಜಿಸ್ಟ್ ಒಬ್ಬರು ನೀಡಿದಂತ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸಮೀಪದ ಆನೇಕಲ್ ನಲ್ಲಿ ಹೀಗೆ ಲೈಂಗಿಕ ಕಿರುಕುಳ ನೀಡಿದಂತ ಕಾಮುಕ ರೆಡಿಯಾಲಜಿಸ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಸಮೀಪದ ಆನೇಕಲ್ ಪಟ್ಟಣದಲ್ಲಿ ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ರೆಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಂತ ಜಯಕುಮಾರ್ ಎಂಬುವರೇ ಹೀಗೆ ಲೈಂಗಿಕ ಕಿರುಕುಳ ನೀಡಿದಂತ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಮಹಿಳೆಯೊಬ್ಬರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಸ್ಕ್ಯಾನಿಂಗ್ ಮಾಡಿಸೋದಕ್ಕೆ ಮಹಿಳೆಯೊಬ್ಬರು ತೆರಳಿದ್ದರು. ಈ ವೇಳೆಯಲ್ಲಿ ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಾಂಗವನ್ನು ರೆಡಿಯಾಲಜಿಸ್ಟ್ ಜಯಕುಮಾರ್ ಮುಟ್ಟಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತ ಪಡಿಸಿದಾಗ ಹೊರಗೆ ಹೇಳಿದಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾರೆ.
ಈ ಎಲ್ಲವನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡು, ಆನೇಕಲ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವಂತ ಪೊಲೀಸರು ಆರೋಪಿ ಜಯಕುಮಾರ್ ಠಾಣೆಗೆ ಕರಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದಂತ ರೆಜಿಯಾಲಜಿಸ್ಟ್ ಬಂಧಿಸಿಲ್ಲ ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.








