ಚಿಕ್ಕಮಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಯಿಂದ ಸೂಚನೆ ನೀಡಲಾಗಿತ್ತು.
ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದರಿಂದ ಸಹಾಯಕ ಚುನಾವಣಾಧಿಕಾರಿ ಜಯಲಕ್ಷ್ಮಮ್ಮ ಎಂಬವುರ ನಗರ ಪೊಲೀಸ್ ಠಾಣೆಗೆ ಸಿ.ಟಿ ರವಿ ವಿರುದ್ಧ ದೂರು ನೀಡಿದ್ದರು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಸಿ.ಟಿ.ರವಿ ಅವರ ಎಕ್ಸ್ ಪೋಸ್ಟ್ ಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಡಿಇಒ ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ ಮತ್ತು ಆರ್ ಪಿ ಕಾಯ್ದೆಯ 126 ರ ಅಡಿಯಲ್ಲಿ 20.03.24 ರಂದು ಎಫ್ ಐಆರ್ ದಾಖಲಿಸಿದ್ದಾರೆ ಎಂದಿದ್ದಾರೆ.
BREAKING: ‘ಚುನಾವಣಾ ಕರ್ತವ್ಯ’ಕ್ಕೆ ಗೈರಾದ ‘ಮೂವರು ಶಿಕ್ಷಕಿ’ಯರ ಅಮಾನತು
ಶಿವಮೊಗ್ಗ: ಸಾಗರದ ‘ಚೂರಿಕಟ್ಟೆ’ ಬಳಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಲಕ್ಷ ಹಣ ಜಪ್ತಿ