ದಾವಣಗೆರೆ: ‘ದೇಶ ವಿಭಜನೆ’ಯ ಹೇಳಿಕೆ ಕೊಡುವವರನ್ನು ‘ಗುಂಡಿಕ್ಕಿ ಕೊಲ್ಲಬೇಕು’ ಎಂಬುದಾಗಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದರು. ಈ ಮೂಲಕ ಪರೋಕ್ಷವಾಗಿ ಸಂಸದ ಡಿ.ಕೆ ಸುರೇಶ್ ವಿರುದ್ಧ ಹರಿಹಾಯ್ದಿದ್ದರು. ಇಂತಹ ಅವರ ವಿರುದ್ಧ ಈಗ ಎಫ್ಐಅರ್ ದಾಖಲಾಗಿದೆ.
ಈ ಕುರಿತಂತೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ದೇಶವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿ ಹೇಳಿಕೆ ನೀಡಿದಂತ ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
‘ದೇಶ ವಿಭಜನೆ’ಯ ಹೇಳಿಕೆ ಕೊಡುವವರನ್ನು ‘ಗುಂಡಿಕ್ಕಿ ಕೊಲ್ಲಬೇಕು’ – ಮಾಜಿ ಸಚಿವ ‘ಕೆಎಸ್ ಈಶ್ವರಪ್ಪ’
ದಾವಣಗೆರೆ: ದೇಶದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಂಸದ ಡಿ.ಕೆ ಸುರೇಶ್ ಗುಂಡಿಕ್ಕಿ ಕೊಲ್ಲಬೇಕು ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದಂತ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ದೇಶದ್ರೋಹ ಮಾಡುವವರು, ದೇಶದ್ರೋಹದ ಹೇಳಿಕೆ ನೀಡೋರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಲಿ ಎಂಬುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷದಲ್ಲಿರುವಂತ ವಿನಯ್ ಕುಲಕರ್ಣಿ, ಡಿ.ಕೆ ಸುರೇಶ್ ಇಬ್ಬರೂ ದೇಶದ್ರೋಹಿಗಳು. ತಾಕತ್ತು ಇದ್ದರೇ ದೇಶದ್ರೋಹ ಹೇಳಿಕೆ ನೀಡಿದ ಈ ಇಬ್ಬರನ್ನು ಪಕ್ಷದಿಂದ ಹೊರಹಾಕಿ ಎಂಬುದಾಗಿ ಆಗ್ರಹಿಸಿದ್ದರು.
ಇನ್ನೂ ಈ ರೀತಿ ದೇಶದ್ರೋಹದ ಹೇಳಿಕೆ ನೀಡುವ, ದೇಶ ದ್ರೋಹ ಕೆಲಸ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವಂತ ಕಾನೂನು ದೇಶದಲ್ಲಿ ಜಾರಿಯಾಗಬೇಕು. ಈ ಮೂಲಕ ಇಂತಹ ಹೇಳಿಕೆಗಳಿಗೆ ಖಡಿವಾಣ ಬೀಳಬೇಕು ಎಂದಿದ್ದರು.
ಈ ಹಿನ್ನಲೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವಿರುದ್ಧ ಈಗ ಎಫ್ಐಆರ್ ದಾಖಲಾಗಿದ್ದು, ಸಂಕಷ್ಟ ಎದುರಾದಂತೆ ಆಗಿದೆ.
“ನಿಮಗೊಂದು ಶಿಕ್ಷೆ ನೀಡ್ತೀನಿ” : ಕ್ಯಾಂಟೀನ್’ನಲ್ಲಿ ವಿವಿಧ ಪಕ್ಷಗಳ ‘8 ಸಂಸದ’ರೊಂದಿಗೆ ‘ಪ್ರಧಾನಿ ಮೋದಿ’ ಭೋಜನಕೂಟ