ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಕುರಿತಂತೆ ಎಕ್ಸ್ ಮಾಡಿ ರಾಜ್ಯ ಚುನಾವಣಾ ಆಯೋಗವು ಎಕ್ಸ್ ಮಾಡಿ ಮಾಹಿತಿ ನೀಡಿದ್ದು, ಅದರಲ್ಲಿ ಬೆಂಗಳೂರಿನ ಆರ್.ಆರ್.ನಗರದ ಅಪಾರ್ಟ್ಮೆಂಟ್ ಮಾಲೀಕರನ್ನುದ್ದೇಶಿಸಿ ಮಾತನಾಡುವಾಗ ಎಂಸಿಸಿ ಉಲ್ಲಂಘಿಸಿದ ಆರೋಪದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬೆಂಗಳೂರಿನ ಎಫ್ಎಸ್ಟಿ ಎಫ್ಐಆರ್ ದಾಖಲಿಸಿದೆ. ಆರ್ ಎಂಸಿ ಯಾರ್ಡ್ ಪಿಎಸ್ ನಲ್ಲಿ ಎಫ್ ಐಆರ್ ಸಂಖ್ಯೆ 78/2024 ಅನ್ನು ಐಪಿಸಿಯ ಸೆಕ್ಷನ್ 171 (ಬಿ) (ಸಿ) (ಇ) (ಎಫ್) ಅಡಿಯಲ್ಲಿ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದರ ಕಾರಣ, ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ.
An FIR is lodged by the FST of Bengaluru against Dy. Chief Minister DK Shivakumar for violation of MCC while addressing apartment owners in RR Nagara. The FIR No.78/2024 at RMC Yard PS is lodged u/s 171(B)(C)(E)(F) of IPC for bribery and undue influence at elections.
— Chief Electoral Officer, Karnataka (@ceo_karnataka) April 20, 2024
ಗೃಹ ಸಚಿವ ಡಾ.ಜಿ ಪರಮೇಶ್ವರ್ ಬೇಜವಾಬ್ದಾರಿ ಹೇಳಿಗೆಕೆ ನನ್ನ ಧಿಕ್ಕಾರ – HDK