ಬೆಂಗಳೂರು: ವಿಚಾರಣೆಯ ವೇಳೆಯಲ್ಲಿ ಇಡಿ ಅಧಿಕಾರಿಗಳು ತಮ್ಮನ್ನು ಲಾಟಿಯಿಂದ ಹೊಡೆದಿದ್ದಾರೆ ಎಂಬುದಾಗಿ ಆರೋಪಿಸಿ ಕೋಮುಲ್ ನಿರ್ದೇಶಕ ವೈ.ಬಿ ಅಶ್ವತ್ಥ ನಾರಾಯಣ ನೀಡಿದಂತ ದೂರಿನ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಕೋಮುಲ್ ನಿರ್ದೇಶಕರಾಗಿದ್ದಂತ ವೈ.ಬಿ ಅಶ್ವತ್ಥ ನಾರಾಯಣ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ವೇಳೆಯಲ್ಲಿ ಪ್ಲಾಸ್ಟಿಕ್ ಪೈಪ್ ನಿಂದ ತಮಗೆ ಹೊಡೆಯಲಾಗಿದೆ ಎಂಬುದಾಗಿ ಆರೋಪಿಸಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಇಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು.
ಅವರು ನೀಡಿದಂತ ದೂರಿನ ಆಧಾರದ ಮೇಲೆ ಇಡಿಯ ಉಪ ನಿರ್ದೇಶ ಮನೋಜ್ ಮಿಟ್ಟಲ್ ಹಾಗೂ ಸಹಾಯಕ ನಿರ್ದೇಶ ಅಜಯ್ ಕುಮಾರ್ ವೈದ್ಯರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣ ರದ್ದು ಕೋರಿ ಇಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ನ್ಯಾಯಪೀಠದ ಮುಂದೆ ದೂರು ದಾರ ವೈ.ಬಿ ಅಶ್ವತ್ಥ ನಾರಾಯಣ್ ಪ್ಲಾಸ್ಟಿಕ್ ಪೈಪ್ ನಿದಂ ಹೊಡೆದಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದು ಸುಳ್ಳು ದೂರೆಂದು ಹೆಚ್ಚುವರಿ ಸಾಲಿಟರಿ ಜನರಲ್ ಎಸ್.ವಿ ರಾಜು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಬಳಿಕ ಹೈಕೋರ್ಟ್ ನ್ಯಾಯಪೀಠವು ಪ್ರಕರಣ ಸಂಬಂಧ ದೂರುದಾರ ವೈ.ಬಿ ಅಶ್ವತ್ಥ ನಾರಾಯಣಗೆ ನೋಟಿಸ್ ನೀಡಿದ್ರೇ, ಪ್ರಕರಣ ಸಂಬಂಧ ಯಾವುದೇ ತನಿಖೆ ನಡೆಸದಂತೆ ವಿಲ್ಸನ್ ಗಾರ್ಡನ್ ಪೊಲೀಸರಿಗೆ ತಡೆ ನೀಡಿ ಆದೇಶಿಸಿದೆ.
‘ಭಾರತ್ ಜೋಡೋ ಯಾತ್ರೆ’ ಮಾಡಿ ‘ದೇಶ ಇಬ್ಭಾಗ’ ಮಾಡಲು ಹೊರಟಿದ್ದಾರೆ – ‘HDK’ ಗಂಭೀರ ಆರೋಪ
ಕುಮಾರಸ್ವಾಮಿ ‘ಕೇಸರಿ ಶಾಲು’ ಹಾಕಬಾರದಿತ್ತು – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ