ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನವಿದೆ. ಅಲ್ಲದೇ ಇದರಲ್ಲಿ ಆರ್ಯುವೇದ ಔಷಧೀಯ ಗುಣಗಳು ಸಾಕಷ್ಟು ಪ್ರಮಾಣದಲ್ಲಿದೆ. ನಿತ್ಯ ಒಂದು ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಹೀಗೆ ತುಳಸಿ ಆರೋಗ್ಯದ ಜೊತೆಗೆ ಸೌಂದರ್ಯದ ಆರೈಕೆ ಕೂಡ ಮಾಡುತ್ತದೆ.
ತುಳಸಿಯಿಂದ ಹೇಗೆಲ್ಲಾ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.
ತುಳಸಿ ಎಲೆಗಳನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ, ನಿಂಬೆ ರಸ ಬೆರಸಿ ಮುಖಕ್ಕೆ ತೆಳುವಾಗಿ ಪ್ಯಾಕ್ ಹಾಕಿಕೊಳ್ಳಿ. ಒಣಗಿದ ಮೇಲೆ ಮಸಾಜ್ ಮಾಡುತ್ತಾ ಮುಖ ತೊಳೆಯಿರಿ. ಇದರಿಂದ ಮೊಡವೆ ಮತ್ತು ಮೊಡವೆ ಕಲೆಗಳು ನಿವಾರಣೆಯಾಗುತ್ತವೆ. ತುಳಸಿ ಪೇಸ್ಟ್ ಜೊತೆ ಸ್ವಲ್ಪ ಕೇಸರಿಯನ್ನು ಬರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಲ್ಲಿ ಬ್ಯಾಕ್ಟಿರಿಯಾ ಗುಣಗಳಿದ್ದು ಮುಖದ ಚರ್ಮವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ.
ಚಳಿಗಾಲದಲ್ಲಿ ತಲೆ ಚರ್ಮ ಒಣಗಿದಂತಾಗಿ ತಲೆ ತುರುಕೆ ಉಂಟಾಗುತ್ತದೆ. ಇದಕ್ಕೆ ತುಳಸಿ ಸೂಕ್ತವಾದ ಔಷಧಿಯಾಗಿದೆ. ರುಬ್ಬಿಕೊಂಡ ತುಳಸಿಗೆ ಕೊಬ್ಬರಿ ಎಣ್ಣೆ ಹಾಗು ಮೆಂತೆ ಪುಡಿಯನ್ನು ಸೇರಿಸಿ ಚೆನಾಗಿ ಕಲಿಸಿ. ನಂತರ ತಲೆಯ ಚರ್ಮಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಒಂದೇ ಬಾರಿಗೆ ತಲೆ ತುರಿಕೆ ಹೋಗುತ್ತದೆ.
ತುಳಸಿ ಒಣಗಿಸಿ ಪುಡಿ ಮಾಡಿಕೊಳ್ಳಿ. ಮತ್ತು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಎರೆಡನ್ನು ಸಮ ಪ್ರಮಾಣದಲ್ಲಿ ಹಾಕಿಕೊಳ್ಳಿ. ಒಂದು ಚಮದಷ್ಟು ಇವೆರಡರ ಮಿಶ್ರಣಕ್ಕೆ ಅರ್ಧ ಚಮಚ ನೀರು ಸೇರಿಸಿ ಪೇಸ್ಟ್ ಮಾಡಿಕೊಂಡು ಹಲ್ಲುಜ್ಜಿ. ಹೀಗೆ ಮಾಡಿದರೆ ಒಸಡಿನ ರಕ್ತಸ್ರಾವ ಕಡಿಮೆಯಾಗಿ, ಒಸಡು ಗಟ್ಟಿಯಾಗುತ್ತವೆ ಹಾಗು ಹಲ್ಲುಗಳು ಹಳದಿ ಇದ್ದರೆ ಬಿಳಿ ಬಣ್ಣತೆ ತಿರುಗುತ್ತವೆ.
ತುಳಸಿಯನ್ನು ಶುಭ್ರವಾಗಿ ತೊಳೆದು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಎರಡು ಚಲಚ ನೆಲ್ಲಿಕಾಯಿ ಪುಡಿ ಹಾಕಿ. ಹಸಿ ನೆಲ್ಲಿಕಾಯಿ ಇದ್ದರೆ ಇನ್ನೂ ಒಳ್ಳೆಯದು. ಈ ಪೇಸ್ಟ್ ಅನ್ನು ತಲೆಗೆ ಪ್ಯಾಕ್ ಹಾಕಿಕೊಂಡು ಒಂದು ಗಂಟೆ ನಂತರ ಬೆಚ್ಚನೆ ನೀರಿನಲ್ಲಿ ತಲೆ ತೊಳೆಯಿರಿ. ಇದರಿಂದ ದೀರ್ಘಕಾಳದ ಹೊಟ್ಟಿನ ಸಮಸ್ಯೆ ಬೇಗನೇ ವಾಸಿಯಾಗುತ್ತದೆ.